ಕೋವಿಡ ಲಾಕ್ ಡೌನ್ ವೇಳೆ ಸಿಕ್ಕ ಸಮಯವನ್ನು ಸಖತ್ತಾಗಿ ಬಳಸಿಕೊಂಡಿರುವ ಕೇರಳದ ಶಫಿ ವಿಕ್ರಮನ್ ಹೆಸರಿನ ತಿರುವನಂತಪುರಂನ ಈ ವ್ಯಕ್ತಿ, ಮಾರ್ಚ್ 2020ರಿಂದ ಇದುವರೆಗೂ ಆನ್ಲೈನ್‌ನಲ್ಲಿ ವಿವಿಧ ತರಬೇತಿಗಳ 130 ಕೋರ್ಸ್‌ಗಳನ್ನು ಪೂರ್ಣಗೊಳಿಸಿದ್ದಾರೆ.
ಐವಿ ಲೀಗ್ ಕಾಲೇಜುಗಳ ಕೋರ್ಸ್‌ಗಳನ್ನು ಸಹ ಇದೇ ವೇಳೆ ಪೂರೈಸಿರುವ ಶಫಿ, ಕೋರ್ಸೆರಾ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಆನ್ಲೈನ್ ಕಲಿಕಾ ಪೋರ್ಟಲ್‌ಗಳ ಕೋರ್ಸ್‌ಗಳನ್ನೂ ಬಿಟ್ಟಿಲ್ಲ.
ಅಪ್ಪ – ಅಮ್ಮನನ್ನು ಅಚ್ಚರಿಗೊಳಿಸಲು ಯುವತಿ ಮಾಡಿದ್ದ ಪ್ಲಾನ್ ಸಖತ್ ವೈರಲ್
ವೈದ್ಯಕೀಯ ಕ್ಷೇತ್ರದ ಅನೇಕ ಕೋರ್ಸ್‌ಗಳನ್ನು ಒಳಗೊಂಡಂತೆ ಒಟ್ಟಾರೆ 145 ಕೋರ್ಸ್‌ಗಳನ್ನು ಶಫಿ ಪೂರೈಸಿದ್ದಾರೆ. ಏಕಕಾಲದಲ್ಲಿ 20 ಕೋರ್ಸ್‌ಗಳಲ್ಲಿ ನಿರತರಾಗಿದ್ದ ಶಫಿ, ಪ್ರಿನ್ಸ್‌ಟನ್, ಯೇಲ್, ಕೊಲಂಬಿಯಾ, ವಾರ್ಟನ್ ವಿವಿಗಳಿಂದಲೂ ಕೋರ್ಸ್‌ಗಳನ್ನು ಮಾಡಿದ್ದಾರೆ. 2 ದಿನಗಳಿಂದ 2 ತಿಂಗಳವರೆಗೆ ವಿವಿಧ ಅವಧಿಗಳನ್ನು ಈ ಕೋರ್ಸ್‌ಗಳು ಒಳಗೊಂಡಿದ್ದವು.
ಲಾಕ್‌ಡೌನ್‌ನಲ್ಲಿ ಸುಮ್ಮನೇ ಕೂರಲು ಇಷ್ಟವಾಗದೇ ವೈದ್ಯಕೀಯ, ಸೈಕಾಲಜಿ, ರೊಬಾಟಿಕ್ಸ್, ಕೃತಕ ಬುದ್ಧಿಮತ್ತೆ, ಬ್ಲಾಕ್‌ಚೇನ್, ಕ್ರಿಪ್ಟೋಕರೆನ್ಸಿ, ವಿಧಿ ವಿಜ್ಞಾನ, ಆಹಾರ ಮತ್ತು ಪೇಯ ನಿರ್ವಹಣೆ ಮತ್ತು ವಿತ್ತಶಾಸ್ತ್ರದ ಅನೇಕ ಕೋರ್ಸ್‌ಗಳನ್ನು ಶಫಿ ತೆಗೆದುಕೊಂಡಿದ್ದಾರೆ.
16 ವಿವಿಧ ದೇಶಗಳ ಸಂಸ್ಥೆಗಳಿಂದ ಕೋರ್ಸ್‌ಗಳನ್ನು ಪೂರೈಸಿರುವ ಶಫಿ, ಅಲ್ಲಿನ ಸಮಯಕ್ಕೆ ಹೊಂದಿಕೊಂಡು ಕೋರ್ಸ್‌ನಲ್ಲಿ ಭಾಗಿಯಾಗಲೆಂದು ಸಂಜೆ 6 ಗಂಟೆಯಿಂದ ಬೆಳಗ್ಗಿನ ಜಾವ 4 ಗಂಟೆವರೆಗೂ ಅಧ್ಯಯನದಲ್ಲಿ ಭಾಗಿಯಾಗಿದ್ದರಂತೆ. ವಿದೇಶೀ ವಿನಿಮಯದ ಸಂಸ್ಥೆಯೊಂದರಲ್ಲಿ ಕೆಲಸದಲ್ಲಿದ್ದ ಶಫಿ, ಈ ಕೋರ್ಸ್‌ಗಳನ್ನು ಪೂರೈಸಲೆಂದೇ ತಮ್ಮ ಕೆಲಸವನ್ನೂ ಬಿಟ್ಟಿದ್ದರು.