ಕೇರಳದ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಯೊಬ್ಬ ತನ್ನನ್ನು ’ಸ್ತನಗಳ ಬೇಟೆಗಾರ’ ಎಂದು ಹೇಳಿಕೊಳ್ಳುವ ಮೂಲಕ ವಿಕೃತಿ ಮೆರೆದಿದ್ದಾನೆ. ಈ ವಿಕೃತ ಕಾಮಿಯು ತನ್ನ ಪ್ರೌಢಾವಸ್ಥೆಯಲ್ಲಿ ಜನಜಂಗುಳಿ ಇರುವ ಕಡೆಗಳಲ್ಲಿ ಹೆಣ್ಣುಮಕ್ಕಳ ಎದೆಯನ್ನು ಮುಟ್ಟಿ , ಮಾಯವಾಗುತ್ತಿದ್ದನಂತೆ. ಇದರಿಂದ ಪಾಪ, ಹೆಣ್ಣುಮಕ್ಕಳ ಅನುಭವಿಸುತ್ತಿದ್ದ ಮಾನಸಿಕ ಯಾತನೆ ಬಗ್ಗೆ ಇವತ್ತಿಗೂ ಆತನಿಗೆ ಪಶ್ಚಾತ್ತಾಪವೇ ಇಲ್ಲ ಎಂಬುದು ಆತನ ಹೆಮ್ಮೆಪಡುವ ಪೋಸ್ಟ್‌ಗಳು ಸಾಬೀತುಪಡಿಸಿವೆ.
ಐಜಿ.ಹ್ಯಾರಿ_ಟಿಡಿಎಂ (ig.harry_tdm) ಎಂಬಾತ ಇನ್‌ಸ್ಟಾಗ್ರಾಂನಲ್ಲಿ ನಡೆಸಿರುವ ತನ್ನ ನೀಚ ಕೃತ್ಯ ಹೊಗಳಿ ಮಾಡಿರುವ ಮೆಸೇಜ್‌ಗಳು ವೈರಲ್ ಆಗಿವೆ. ಗಾಯಕಿ ಚಿನ್ಮಯಿ ಶ್ರೀಪಾದ್ ಅವರು ಟ್ವಿಟರ್‌ನಲ್ಲಿ ವಿಕೃತಕಾಮಿಯ ಪೋಸ್ಟ್‌ಗಳು, ಚಾಟ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿದ್ದಾರೆ.
ಸಿಂದಗಿಯಲ್ಲಿ ಬಿಜೆಪಿ, ಹಾನಗಲ್ ನಲ್ಲಿ ಕಾಂಗ್ರೆಸ್ ಮುನ್ನಡೆ
ಏನೋ ಬಸ್ಸಿನಲ್ಲಿ ಜನ ಹೆಚ್ಚಿದ್ದ ಕಾರಣ ತಮ್ಮ ಎದೆಗೆ ಯಾರದ್ದೂ ಕೈ ತಾಕಿದೆ ಎಂದು ಇನ್ಮುಂದೆ ಹೆಣ್ಣುಮಕ್ಕಳು ಭಾವಿಸುವುದು ತಪ್ಪಾಗುತ್ತದೆ. ಇಂಥ ಅಸಭ್ಯ, ಅನಾಗರಿಕ, ವಿಕೃತ ಮನಸ್ಥಿತಿಯ ವರ್ತನೆಗಳು ಕೆಲವು ಹುಡುಗರ ಪಾಲಿಗೆ ಮೋಜಿನ ಆಟವಾಗಿದೆ ಎಂದು ಚಿನ್ಮಯಿ ಅಸಮಾಧಾನ ಹೊರಹಾಕಿದ್ದಾರೆ. 8 ಗಂಟೆಗಳಲ್ಲಿ 52 ಹೆಣ್ಣುಮಕ್ಕಳ ಎದೆ ಮುಟ್ಟಿದ್ದೇನೆ. ಅವರ ಅರಿವಿಗೇ ಬರದಂತೆ ಜಾರಿಕೊಂಡಿದ್ದೇನೆ. 10 ವರ್ಷಗಳ ಮುನ್ನ, ನನ್ನ ಮತ್ತು ಸ್ನೇಹಿತರ ಈ ಚಾಲೆಂಜ್ ಗೇಮ್ ಬಹಳ ಮನರಂಜನೆಯಿಂದ ಕೂಡಿತ್ತು ಎಂದು ಹ್ಯಾರಿ ಎಂಬಾತ ಇನ್‌ಸ್ಟಾಗ್ರಾಂನಲ್ಲಿ ಚಾಟಿಂಗ್ ಮಾಡಿರುವುದು ಸ್ಕ್ರೀನ್‌ಶಾಟ್ ಮೂಲಕ ಖಾತ್ರಿಯಾಗಿದೆ.
ಕೆಲವು ಬಾರಿ ಹುಡುಗಿಯರಿಗೆ ಅವರ ಎದೆ ಮುಟ್ಟಿದ್ದು ಗೊತ್ತಾಗಿ ಇನ್ನೇನು ಕಪಾಳಕ್ಕೆ ಬಾರಿಸಲು ಅವರು ಮುಂದಾದ ಕೂಡಲೇ, ಕಣ್ಣೀರು ಬರುವಂತೆ ಮುಖ ಮಾಡಿಕೊಂಡು ಕ್ಷಮೆ ಕೇಳಿಬಿಡುತ್ತಿದ್ದೆ. ಆಗ ಅವರು ನನ್ನ ಮುಖದ ಭಾವಕ್ಕೆ ಮರುಳಾಗಿ ಬಿಟ್ಟುಬಿಡುತ್ತಿದ್ದರು ಎಂದು ಹ್ಯಾರಿ ಬರೆದುಕೊಂಡಿದ್ದಾನೆ.
ಇದಕ್ಕೆ ಟ್ವಿಟರ್‌ನಲ್ಲಿ ಹಲವು ಮಹಿಳೆಯರು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ತಾಯಿ, ಸೋದರಿಯರ ಮನಸ್ಥಿತಿಯನ್ನು ಆಪ್ತವಾಗಿ ತಿಳಿದುಕೊಳ್ಳದ ಹುಡುಗರು, ಲೈಂಗಿಕ ವಿಕೃತಿ ಮೆರೆಯುತ್ತಾರೆ. ಅಂಥವರಿಗೆ ಕಾನೂನು ಪಾಠ ಕಲಿಸಬೇಕು. ಇಲ್ಲವೇ, ಮನೆಯಲ್ಲಿನ ಹೆಣ್ಣುಮಕ್ಕಳೇ ಕಿವಿಹಿಂಡಬೇಕು ಎಂದಿದ್ದಾರೆ.