ಉತ್ತರ ಕೇರಳದಲ್ಲಿ ವಿದ್ಯಾರ್ಥಿಗೆ ಐರನ್ ಬಾಕ್ಸ್ ನಿಂದ ಬರೆ ಎಳೆದ ಆರೋಪದ ಮೇಲೆ ಮದರಸಾ ಶಿಕ್ಷಕನನ್ನು ಬಂಧಿಸಲಾಗಿದೆ.
ಪೊಲೀಸರ ಪ್ರಕಾರ, ಮದರಸಾ ಶಿಕ್ಷಕನು ಬಾಲಕನ ಖಾಸಗಿ ಭಾಗಗಳಿಗೆ ಮೆಣಸಿನ ಪುಡಿ ಹಚ್ಚಿದ್ದಾನೆ. ಶಿಕ್ಷಕನನ್ನು ಮಲಪ್ಪುರಂ ಜಿಲ್ಲೆಯ ತಾನೂರ್ ಮೂಲದ ಉಮೈರ್ ಅಶ್ರಫಿ ಎಂದು ಗುರುತಿಸಲಾಗಿದೆ.
ವಿದ್ಯಾರ್ಥಿಯು ಪೊಲೀಸರಿಗೆ ದೂರು ನೀಡಿದ್ದು, ಅಶ್ರಫಿ ಕೇರಳ ರಾಜ್ಯದಿಂದ ಪರಾರಿಯಾಗಿದ್ದಾನೆ. ಕರ್ನಾಟಕ ಮತ್ತು ತಮಿಳುನಾಡಿನ ವಿವಿಧ ಸ್ಥಳಗಳಲ್ಲಿ ಅಡಗಿಕೊಂಡಿದ್ದ ಆತನಿಗಾಗಿ ಪೊಲೀಸ್ ಅಧಿಕಾರಿಗಳು ಹುಡುಕಾಟ ನಡೆಸಿದ್ದರು. ತಮಿಳುನಾಡಿನ ಕೊಯಮತ್ತೂರಿನಿಂದ ಅಶ್ರಫಿ ತನ್ನ ತವರು ಜಿಲ್ಲೆಗೆ ಮರಳಲಿದ್ದಾನೆ ಎಂಬ ಸುಳಿವಿನ ಮೇರೆಗೆ ಪೊಲೀಸ್ ತಂಡ ಗುರುವಾರ ತಾನೂರಿನಲ್ಲಿ ಬೀಡುಬಿಟ್ಟಿದ್ದು, ಶೋಧ ಕಾರ್ಯ ನಡೆಸಿದೆ. ಪೊಲೀಸರನ್ನು ಕಂಡು ಪರಾರಿಯಾಗಲು ಯತ್ನಿಸಿದ ಅಶ್ರಫಿಯನ್ನು ಬಂಧಿಸಲಾಯಿತು.
ಆತನ ಬಂಧನದ ನಂತರ, ಕನ್ನವಂ ಪೊಲೀಸರು ಆತನ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಆರೋಪ ಹೊರಿಸಿದ್ದಾರೆ. ಆತನನ್ನು ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಶುಕ್ರವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.