
ತಿರುವನಂತಪುರಂ: ಕೇರಳದಲ್ಲಿ ಲಾಟರಿ ಮಾರಾಟ ಮಾಡುವ ವ್ಯಕ್ತಿಗೆ ಅದೃಷ್ಟ ಖುಲಾಯಿಸಿದೆ. ಮಾರಾಟವಾಗದೇ ಉಳಿದ ಲಾಟರಿ ಟಿಕೆಟ್ ಗೆ ಬರೋಬ್ಬರಿ 12 ಕೋಟಿ ರೂಪಾಯಿ ಬಹುಮಾನ ಬಂದಿದೆ.
ಕೇರಳದ ಕೊಲ್ಲಂನಲ್ಲಿ ಲಾಟರಿ ಟಿಕೆಟ್ ಮಾರಾಟ ಮಾಡುವ ಸರ್ಫರುದ್ದೀನ್ ಕೋಟ್ಯಾಧಿಪತಿಯಾಗಿದ್ದಾರೆ. 46 ವರ್ಷದ ಸರ್ಫರುದ್ದೀನ್ ಅವರು ಕ್ರಿಸ್ಮಸ್ ಮತ್ತು ಹೊಸ ವರ್ಷದ ಕೇರಳ ಸರ್ಕಾರದ ಲಾಟರಿ ಟಿಕೆಟ್ ಮಾರಾಟ ಮಾಡಿದ್ದು, ಅವರ ಬಳಿ ಮಾರಾಟವಾಗದೇ ಉಳಿದ ಟಿಕೆಟ್ ಗೆ 12 ಕೋಟಿ ರೂಪಾಯಿ ಬಹುಮಾನ ಬಂದಿದೆ. ಏಜೆಂಟ್ ಕಮಿಷನ್ ಮತ್ತು ತೆರಿಗೆ ಕಡಿತವಾಗಿ ಸರ್ಫರುದ್ಧೀನ್ ಅವರಿಗೆ 7.5 ಕೋಟಿ ರೂಪಾಯಿ ಬಹುಮಾನ ಸಿಗಲಿದೆ.