ಬೆಂಗಳೂರು: KSRTC ಹೆಸರು ಬಳಕೆ ವಿವಾದದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಜಯ ಸಿಕ್ಕಿದೆ. KSRTC ಹೆಸರು ಬಳಕೆಗೆ ಕೇರಳ ಆಕ್ಷೇಪ ವ್ಯಕ್ತಪಡಿಸಿ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದೆ.
ಕರ್ನಾಟಕ ರಾಜ್ಯ ಸಾರಿಗೆ ನಿಗಮ ‘KSRTC’ ಹೆಸರು ಬಳಕೆ ಮಾಡುತ್ತಿದ್ದು, ಕೇರಳ ಸಾರಿಗೆ ಸಂಸ್ಥೆ 2015ರಲ್ಲಿ ಚೆನ್ನೈನಲ್ಲಿ ಬೌದ್ಧಿಕ ಆಸ್ತಿ ಮೇಲ್ಮನವಿ ಮಂಡಳಿಗೆ ಅರ್ಜಿ ಸಲ್ಲಿಸಿತ್ತು. ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ KSRTC ಎಂದು ಬಳಸುತ್ತಿದ್ದು, ಕರ್ನಾಟಕಕ್ಕೆ KSRTC ಬಳಕೆಗೆ ಅವಕಾಶ ನೀಡಬಾರದು ಎಂದು ಕೋರಿತ್ತು.
ಅರ್ಜಿ ವಿಚಾರಣೆಯಲ್ಲಿರುವಾಗ ಬೌದ್ಧಿಕ ಆಸ್ತಿ ಮಂಡಳಿ ರದ್ದಾಗಿದ್ದು, ಅರ್ಜಿ ಮದ್ರಾಸ್ ಹೈಕೋರ್ಟ್ ಗೆ ವರ್ಗಾವಣೆಯಾಗಿತ್ತು. ಕರ್ನಾಟಕ ಮತ್ತು ಕೇರಳ KSRTC ಹೆಸರು ಬಳಸಬಹುದು ಎಂದು ಮದ್ರಾಸ್ ಹೈಕೋರ್ಟ್ ಹೇಳಿದ್ದು, ಕೇರಳದ ಅರ್ಜಿಯನ್ನು ವಜಾಗೊಳಿಸಿದೆ.