ಕೇರಳದ ಪ್ರಸಿದ್ಧ ಯಾತ್ರಾ ಸ್ಥಳ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ 24 ದಿನಗಳಲ್ಲಿ 125 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿದೆ.
ಮಂಡಲ ಋತು ಆರಂಭವಾದ 24 ದಿನಗಳಲ್ಲಿ ಕಾಣಿಕೆ ಮತ್ತು ಇತರೆ ಸೇವೆಗಳ ರೂಪದಲ್ಲಿ 125 ಕೋಟಿ ರೂ. ಆದಾಯ ಬಂದಿದೆ. ಕಳೆದ ಶುಕ್ರವಾರ ಅಯ್ಯಪ್ಪ ಸ್ವಾಮಿ ಸನ್ನಿಧಾನದಲ್ಲಿ ಭಕ್ತರ ದಟ್ಟಣೆ ಭಾರಿ ಹೆಚ್ಚಾಗಿದ್ದು, 1.10 ಲಕ್ಷ ಭಕ್ತರು ಅಯ್ಯಪ್ಪನ ದರ್ಶನಕ್ಕೆ ಆಗಮಿಸಿದ್ದರು.
ಭಕ್ತರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಿರುವಾಮಕೂರು ದೇವಸ್ವಂ ಮಂಡಳಿ ಅಧ್ಯಕ್ಷ ಕೆ. ಅನಂತಗೋಪನ್ ಮಾಹಿತಿ ನೀಡಿದ್ದಾರೆ.
ಎಲ್ಲರಿಗೂ ಸುಗಮ ದರ್ಶನಕ್ಕೆ ಅವಕಾಶ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಜನಸಂದಣಿ ನಿಯಂತ್ರಿಸಲು ಮರಕ್ಕೂಟಂನಿಂದ ಹಂತ ಹಂತವಾಗಿ ಭಕ್ತರನ್ನು ಸನ್ನಿಧಾನಕ್ಕೆ ಬಿಡಲಾಗುವುದು. ಅಯ್ಯಪ್ಪನ ದರ್ಶನಕ್ಕೆ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲಬೇಕಾಗಿದ್ದು, ಮಕ್ಕಳಿಗೆ ತೊಂದರೆಯಾಗದಂತೆ ಶೀಘ್ರ ದರ್ಶನಕ್ಕೆ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಮುಂದಿನ 15 ದಿನಗಳಿಗೆ ಸಾಕಾಗುವಷ್ಟು ಅಪ್ಪಂ ಮತ್ತು ಅರವಣ ಪ್ರಸಾದ ದಾಸ್ತಾನು ಇದೆ ಎಂದು ಕೆ. ಅನಂತಗೋಪನ್ ಹೇಳಿದ್ದಾರೆ.