ನಾಗರಿಕ ಕಾನೂನು ರಕ್ಷಕರಾಗಿ ನಿಂತ ಕೇರಳ ಹೈಕೋರ್ಟ್, ಅತ್ಯಾಚಾರಕ್ಕೊಳಗಾದ ದಿವ್ಯಾಂಗ ಚೇತನ ಸಂತ್ರಸ್ತೆ 15 ವಾರಗಳ ಬಳಿಕವೂ ಗರ್ಭಪಾತ ಮಾಡಿಸಿಕೊಳ್ಳಬಹುದು ಎಂದು ಮಹತ್ವದ ಆದೇಶ ಹೊರಡಿಸಿದೆ.
ತಿರುವನಂತಪುರಂನಲ್ಲಿರುವ ಸರ್ಕಾರಿ ಹುಚ್ಚಾಸ್ಪತ್ರೆ ಹಾಗೂ ಶ್ರೀ ಅವಿಟ್ಟೊಮ್ ತ್ರಿನುಲ್ ಆಸ್ಪತ್ರೆಗೆ ಗರ್ಭಧಾರಣೆ ಬಗ್ಗೆ ನಿರ್ಧಾರ ಕೈಗೊಳ್ಳಲು ಕೇರಳ ಹೈಕೋರ್ಟ್ ಅನುಮತಿ ನೀಡಿದೆ. ಅತ್ಯಾಚಾರಕ್ಕೊಳಗಾಗಿದ್ದ ಬಿಹಾರ ಮೂಲದ ಮಹಿಳೆಯ ಭ್ರೂಣದ ಅಂಗಾಂಶವನ್ನು ತೆಗೆದುಕೊಂಡು ಡಿಎನ್ಎ ಪರೀಕ್ಷೆಗೆ ನಿರ್ವಹಿಸಲು ಆಸ್ಪತ್ರೆಗಳಿಗೆ ನಿರ್ದೇಶನ ನೀಡಲಾಗಿದೆ.
ವೈದ್ಯಕೀಯ ಮಂಡಳಿ ನೀಡಿದ ವರದಿ ಆಧರಿಸಿದ ತೀರ್ಪು ಪ್ರಕಟಿಸಿದ ನ್ಯಾಯಮೂರ್ತಿ ಪಿ.ಬಿ. ಸುರೇಶ್ ಕುಮಾರ್ ಗರ್ಭಧಾರಣೆ ಮುಂದುವರಿಕೆಯಿಂದ ಅಪಾಯವೇನಿಲ್ಲವಾದರೂ ಸಹ ತಾಯಿ – ಮಗುವಿನ ಜೀವಕ್ಕೆ ಅಪಾಯ ತಂದೊಡ್ಡಬಹುದು ಎಂಬ ಅಪಾಯವನ್ನೂ ತಳ್ಳಿ ಹಾಕಲು ಸಾಧ್ಯವಿಲ್ಲವಾದ್ದರಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಿದ್ದರು.