
ಶುಕ್ರವಾರ ಈ ಸಂಬಂಧ ಆದೇಶವನ್ನು ಹೊರಡಿಸಿರುವ ಕೇರಳ ಸರ್ಕಾರವು ಚಿಕ್ಕ ಭಕ್ತರೊಂದಿಗೆ ಆಗಮಿಸುವ ಪೋಷಕರು ಹಾಗೂ ವಯಸ್ಕರು ಸ್ಯಾನಿಟೈಸರ್ ಹಾಗೂ ಮಾಸ್ಕ್ಗಳನ್ನು ಕಡ್ಡಾಯವಾಗಿ ಕೊಂಡೊಯ್ಯಬೇಕು. ಜೊತೆಯಲ್ಲಿ ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯವಾಗಿದೆ.
ಶಬರಿಮಲೆಗೆ ನಿಯೋಜಿಸಲಾದ ಯಾತ್ರಾರ್ಥಿಗಳು ಹಾಗೂ ಸಿಬ್ಬಂದಿ ಕೊರೊನಾ ಲಸಿಕೆಯ ಪ್ರಮಾಣ ಪತ್ರ ಅಥವಾ ಆರ್ಟಿ ಪಿಸಿಆರ್ ನೆಗೆಟಿವ್ ವರದಿಯನ್ನು ಹೊಂದಿರೋದು ಕಡ್ಡಾಯವಾಗಿದೆ.
ಆರ್ಟಿ ಪಿಸಿಆರ್ ಪರೀಕ್ಷೆಯಿಲ್ಲದೇ ಮಕ್ಕಳಿಗೆ ಶಬರಿಮಲೆ ಯಾತ್ರೆಗೆ ಅನುಮತಿ ನೀಡಲಾಗಿದೆ ಎಂದು ಹೇಳಲು ಸರ್ಕಾರಕ್ಕೆ ಸಂತೋಷವಾಗಿದೆ. ಮಕ್ಕಳೊಂದಿಗೆ ಬರುವ ಪೋಷಕರು ಸೋಪ್ ಅಥವಾ ಸ್ಯಾನಿಟೈಸರ್, ಮಾಸ್ಕ್ ಹಾಗೂ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು ಕಡ್ಡಾಯವಾಗಿದೆ. ಮಕ್ಕಳ ಆರೋಗ್ಯ ಸಮಸ್ಯೆಗಳಿಗೆ ಪೋಷಕರೇ ಜವಾಬ್ದಾರಿ ಎಂದು ಆದೇಶದಲ್ಲಿ ಹೇಳಲಾಗಿದೆ.