ಕೇರಳದ ತ್ರಿಶ್ಶೂರ್ ಜಿಲ್ಲೆಯ ಡೆಲಿಶಾ ಡೇವಿಸ್ ಎಂಬ 23 ವರ್ಷದ ಯುವತಿ ಮಹಿಳಾ ಸಬಲೀಕರಣವನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ದಿದ್ದಾರೆ. ಎರ್ನಾಕುಲಂನ ಇರುಂಪಾನಂ ಎಂಬಲ್ಲಿರುವ ಹಿಂದೂಸ್ತಾನ ಪೆಟ್ರೋಲಿಯಂನ ಎಲ್‌ಪಿಜಿ ಘಟಕದಿಂದ ಮಲಪ್ಪುರಂನ ತಿರೂರಿಗೆ ಸಾಗಿಸುತ್ತಿದ್ದ ಇಂಧನ ಟ್ಯಾಂಕರ್ ಚಲಾಯಿಸುತ್ತಿದ್ದ ಡೆಲಿಶಾ ಡೇವಿಸ್‌ರನ್ನು ಅಡ್ಡಗಟ್ಟಿದ ಪೊಲೀಸ್ ಅಧಿಕಾರಿಯೊಬ್ಬರಿಗೆ ಬೆರಗಾಗುವ ವಾಸ್ತವವೊಂದು ಅರಿವಿಗೆ ಬಂದಿದೆ.
ಅಪಾಯಕಾರಿ ವಸ್ತುಗಳಿರುವ ಟ್ಯಾಂಕರ್‌ಗಳನ್ನು ಓಡಿಸಲು ತನ್ನ ಬಳಿಕ ಇರುವ ಪರವಾನಿಗೆಯನ್ನು ತೋರಿದ ಡೆಲಿಶಾ, ತಾನು ಪ್ರತಿ ಟ್ರಿಪ್‌ನಲ್ಲೂ 280 ಕಿಮೀಗಳಷ್ಟು ದೂರ ಟ್ಯಾಂಕರ್ ಓಡಿಸುವುದಾಗಿ ತಿಳಿಸಿದ್ದಾರೆ. ವಾಣಿಜ್ಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿರುವ ಡೆಲಿಶಾ, ಖುದ್ದು ತಮ್ಮ ತಂದೆಯಿಂದಲೇ ಡ್ರೈವಿಂಗ್ ಕಲಿತಿದ್ದರು.
ಚಿನ್ನ – ಬೆಳ್ಳಿ ಖರೀದಿದಾರರಿಗೆ ಗುಡ್ ನ್ಯೂಸ್
“ನನ್ನ ಇಬ್ಬರು ಸಹೋದರಿಯರಿಗೆ ಡ್ರೈವಿಂಗ್ ಬಗ್ಗೆ ಯಾವುದೇ ಆಸಕ್ತಿ ಇರಲಿಲ್ಲ. ನನಗೆ ಬಾಲ್ಯದಿಂದಲೂ ವಾಹನಗಳು ಹಾಗೂ ಡ್ರೈವಿಂಗ್ ಮೇಲೆ ವಿಪರೀತ ಆಸಕ್ತಿ. ಹಾಗಾಗಿ ನನ್ನ ತಂದೆ ಪ್ರತಿನಿತ್ಯ ಹೋಗುತ್ತಿದ್ದ ಟ್ರಿಪ್‌ಗಳ ವೇಳೆ ಅವಕಾಶ ಸಿಕ್ಕಾಗೆಲ್ಲಾ ಚಾಲನೆ ಮಾಡಲು ಮುಂದಾಗುತ್ತಿದ್ದೆ. ಬರುಬರುತ್ತಾ ಟ್ಯಾಂಕರ್ ಓಡಿಸಲು ಆಸಕ್ತಿ ಬೆಳೆಸಿಕೊಂಡೆ. ಈಗ ಡ್ರೈವಿಂಗ್ ಮಾಡುವುದು ನನ್ನ ಅಭಿರುಚಿಯಾಗಿದ್ದು, ನನ್ನ ಅಪ್ಪ ಇದಕ್ಕೆ ಸಂಪೂರ್ಣವಾಗಿ ಬೆಂಬಲ ಕೊಡುತ್ತಿದ್ದಾರೆ. ಇಲ್ಲವಾದಲ್ಲಿ ಇವೆಲ್ಲಾ ಸಾಧ್ಯವಾಗುತ್ತಿರಲಿಲ್ಲ.
ಅಪಾಯಕಾರಿ ವಾಹನಗಳನ್ನು ಡ್ರೈವ್ ಮಾಡುವ ಮತ್ತೊಬ್ಬ ಮಹಿಳೆ ಕೇರಳದಲ್ಲಿ ಇದ್ದಾರೆಯೇ ಎಂದು ನನಗಂತೂ ಗೊತ್ತಿಲ್ಲ ಎಂದ ಡೆಲಿಶಾ, “ಅಪಾಯಕಾರಿ ವಸ್ತುಗಳನ್ನು ಸಾಗಿಸುವ ವಾಹನ ಡ್ರೈವ್ ಮಾಡಲು ಪರವಾನಿಗೆ ಪಡೆದ ಮಹಿಳೆ ನಾನೇ ಇರಬೇಕು. ಆದರೆ ನಿಜವಾದ ಅಚ್ಚರಿಯೆಂದರೆ, ಕಳೆದ ಮೂರು ವರ್ಷಗಳಿಂದ ನನ್ನನ್ನು ಟ್ಯಾಂಕರ್ ಓಡಿಸುತ್ತಾ ಇರುವಾಗ ಯಾರೂ ನನ್ನನ್ನು ಗಮನಿಸಿರಲಿಲ್ಲ. ನನ್ನ ಸ್ನೇಹಿತರೂ ಸಹ ಇದನ್ನು ಮೊದಲಿಗೆ ನಂಬಿರಲಿಲ್ಲ” ಎಂದು ತಿಳಿಸಿದ್ದಾರೆ.