alex Certify ಆಟವಾಡುತ್ತಾ ರಿಮೋಟ್​ ಕಂಟ್ರೋಲರ್​ ಬ್ಯಾಟರಿ ನುಂಗಿದ ಮಗು: ಯಶಸ್ವಿ ಶಸ್ತ್ರಚಿಕಿತ್ಸೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಟವಾಡುತ್ತಾ ರಿಮೋಟ್​ ಕಂಟ್ರೋಲರ್​ ಬ್ಯಾಟರಿ ನುಂಗಿದ ಮಗು: ಯಶಸ್ವಿ ಶಸ್ತ್ರಚಿಕಿತ್ಸೆ

ತಿರುವನಂತಪುರ: ಮನೆಯಲ್ಲಿ ಚಿಕ್ಕ ಮಕ್ಕಳು ಇರುವಾಗ ಎಷ್ಟು ಎಚ್ಚರಿಕೆಯಿಂದ ಇದ್ದರೂ ಕಡಿಮೆಯೇ. ಅಂಥದ್ದೇ ಒಂದು ಆಘಾತಕಾರಿ ಘಟನೆ ಕೇರಳದಲ್ಲಿ ನಡೆದಿದೆ.

ಎರಡು ವರ್ಷದ ಬಾಲಕ ಟಿ.ವಿಯ ರಿಮೋಟ್​ ಕಂಟ್ರೋಲರ್​ನ ಬ್ಯಾಟರಿ ನುಂಗಿದ ಘಟನೆ ನಡೆದಿದೆ. ಅದೃಷ್ಟವಶಾತ್​ ಇದು ತಕ್ಷಣ ತಿಳಿದುಬಂದ ಹಿನ್ನೆಲೆಯಲ್ಲಿ ಶಸ್ತ್ರಚಿಕಿತ್ಸೆಯ ಮೂಲಕ ವೈದ್ಯರು ಬ್ಯಾಟರಿಯನ್ನು ಹೊರಕ್ಕೆ ತೆಗೆದಿದ್ದಾರೆ.

ಮಗು ರಿಷಿಕೇಷ್​ನ ಜೀವಕ್ಕೆ ಅಪಾಯ ಆಗುವುದು ಇದರಿಂದ ತಪ್ಪಿದೆ. ನಿಮ್ಸ್ ಆಸ್ಪತ್ರೆಯ ಗ್ಯಾಸ್ಟ್ರೋಎಂಟರಾಲಜಿಸ್ಟ್ ಜಯಕುಮಾರ್ ನೇತೃತ್ವದಲ್ಲಿ ಶಸ್ತ್ರಚಿಕಿತ್ಸೆ ನೆರವೇರಿಸಲಾಯಿತು.

ಟಿವಿ ರಿಮೋಟ್‌ನಲ್ಲಿ ಬಳಸಲಾಗಿದ್ದ ಐದು ಸೆಂಟಿಮೀಟರ್ ಉದ್ದ ಮತ್ತು ಒಂದೂವರೆ ಸೆಂಟಿಮೀಟರ್ ಅಗಲದ ಬ್ಯಾಟರಿಯನ್ನು ಮಗು ಆಟವಾಡುತ್ತಾ ನುಂಗಿತ್ತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...