ನವದೆಹಲಿ: ದೇಶದ ಶೇಕಡ 62 ರಷ್ಟು ಕೊರೊನಾ ಕೇಸ್ ಗಳು ಕಳೆದವಾರ ಕೇರಳದಲ್ಲಿ ಪತ್ತೆಯಾಗಿವೆ ಎಂದು ಕೇಂದ್ರದ ಆರೋಗ್ಯ ಇಲಾಖೆ ಕಾರ್ಯದರ್ಶಿ ಡಾ. ರಾಜೇಶ್ ಭೂಷಣ್ ಹೇಳಿದ್ದಾರೆ.
ದೇಶದಲ್ಲಿ ಕೊರೋನಾ ಕೇಸ್ ಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಕೇರಳದಲ್ಲಿ 1,61,596 ಸಕ್ರಿಯ ಪ್ರಕರಣಗಳು ಇವೆ. ಕರ್ನಾಟಕದಲ್ಲಿರುವ 13,650 ಸಕ್ರಿಯ ಕೇಸ್ ಗಳಿದ್ದು, 33 ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಶೇಕಡ 10 ಕ್ಕಿಂತ ಕಡಿಮೆ ಇದೆ ಎಂದು ಮಾಹಿತಿ ನೀಡಿದ್ದಾರೆ.
ಸೆಪ್ಟೆಂಬರ್ 21 ರಂದು ಎಲ್ಲ ರಾಜ್ಯಗಳಿಗೆ SOP ನೀಡಲಾಗಿದ್ದು, ಕಂಟೇನ್ಮೆಂಟ್ ವಲಯದಲ್ಲಿ ಜನ ಹೆಚ್ಚು ಸೇರಬಾರದು, ಶೇಕಡ 5 ಕ್ಕಿಂತ ಹೆಚ್ಚಿನ ಪಾಸಿಟಿವಿಟಿ ಇರುವ ಜಿಲ್ಲೆಗಳಲ್ಲಿ ಸಾಮೂಹಿಕವಾಗಿ ಜನರು ಸೇರುವುದನ್ನು ತಡೆಯಬೇಕು ಎಂದು ಹೇಳಿದ್ದಾರೆ.