ಕೊಚ್ಚಿ: ಕೇರಳದ ಕೊಚ್ಚಿಯ ನೆಹರೂ ಸ್ಟೇಡಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕಿ ಉಮಾ ಥಾಮಸ್ ಸ್ಟೇಡಿಯಂ ಗ್ಯಾಲರಿಯಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು.
ಶಾಸಕಿಯ ಬೆನ್ನುಮೂಳೆ, ಮೆದುಳು ಭಾಗಕ್ಕೆ ತೀವ್ರವಾದ ಪೆಟ್ಟಾಗಿತ್ತು. ಆಸ್ಪತ್ತೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾಸಕಿ ಉಮಾಥಾಮಸ್ ಅವರ ಆರೋಗ್ಯದಲ್ಲಿ ಗಮನಾರ್ಹ ಸುಧಾರಣೆಯಾಗಿದೆ. ವೈದ್ಯರ ಸಂಜ್ಞೆಗಳಿಗೆ ಪ್ರತಿಕ್ರಿಯಿಸುತ್ತಿದ್ದಾರೆ.
ಶಾಸಕಿ ಉಮಾ ಕಣ್ಣು ತೆರೆದಿದ್ದು, ಅವರ ಕೈ-ಕಾಲುಗಳಲ್ಲಿ ಚಲನೆ ಕಂಡುಬಂದಿದೆ. ತಮ್ಮ ಮಕ್ಕಳನ್ನು ಗುರುಇಸುತ್ತಿದಾರೆ. ಇದು ಅವರ ಚೇತರಿಕೆ ಹಂತದಲ್ಲಿ ಗಮನಾರ್ಹ ಹೆಜ್ಜೆಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಅವರು ಪೂರ್ಣ ಚೇತರಿಕೆ ಕಾಣ ಇನ್ನೂ ಕೆಲ ಸಮಯಬೇಕು. ಅವರ ಶ್ವಾಸಕೋಶದ ಸ್ಥಿತಿ ಇನ್ನೂ ಗಂಭೀರ ಸ್ಥಿತಿಯಲ್ಲಿಯೇ ಇದೆ. ಚಿಕಿತ್ಸೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ.
ಡಿ.29ರಂದು ಕೊಚ್ಚಿಯ ಜವಹರಲಾಲ್ ನೆಹರೂ ಸ್ಟೇಡಿಯಂನಲ್ಲಿ ನಡೆದ ಕಾರ್ಯಕ್ರಮದ ವೇಳೆ ಕಾಂಗ್ರೆಸ್ ಶಾಸಕಿ ಉಮಾ ಥಾಮಸ್ ಸ್ಟೇಡಿಯಂ ಗ್ಯಾಲರಿಯಿಂದ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು. ಪ್ರಕರಣ ಸಂಬಂಧ ಭದ್ರತಾ ಲೋಪ ಹಿನ್ನೆಲೆಯಲ್ಲಿ ಇವೆಂಟ್ ಮ್ಯಾನೇಜ್ ಮೆಂಟ್ ವ್ಯವಸ್ಥಾಕರನ್ನು ಬಂಧಿಸಲಾಗಿದೆ.