alex Certify ನೈತಿಕ ಪೊಲೀಸ್ ​ಗಿರಿಗೆ ಪ್ರತಿರೋಧ; ತೊಡೆ ಮೇಲೆ ಕುಳಿತು ವಿದ್ಯಾರ್ಥಿಗಳ ಪ್ರತಿಭಟನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೈತಿಕ ಪೊಲೀಸ್ ​ಗಿರಿಗೆ ಪ್ರತಿರೋಧ; ತೊಡೆ ಮೇಲೆ ಕುಳಿತು ವಿದ್ಯಾರ್ಥಿಗಳ ಪ್ರತಿಭಟನೆ

ಆಗಾಗ್ಗೆ ನಮ್ಮ ದೇಶದಲ್ಲಿ ನೈತಿಕ ಪೊಲೀಸ್​ ಗಿರಿ ನಡೆಯುತ್ತಿರುತ್ತದೆ. ಕೇರಳದಲ್ಲೂ ಒಂದು ವಿಚಿತ್ರ ನೈತಿಕ ಪೊಲೀಸ್​ಗಿರಿ ಇತ್ತೀಚೆಗೆ ನಡೆದಿದ್ದು, ಅದಕ್ಕೆ ವಿಶೇಷ ರೀತಿಯಲ್ಲಿ ಪ್ರತಿರೋಧ ವ್ಯಕ್ತವಾಗಿದೆ.

ಕೇರಳದ ಕಾಲೇಜ್​ ಆಫ್​ ಇಂಜಿನಿಯರಿಂಗ್​ ತಿರುವನಂತಪುರ ಬಳಿ ಇರುವ ಬಸ್​ ನಿಲ್ದಾಣವು ತಿರುವನಂತಪುರಂನಲ್ಲಿರುವ ಕಾಲೇಜು ವಿದ್ಯಾರ್ಥಿಗಳ ನೆಚ್ಚಿನ ಹ್ಯಾಂಗ್ ​ಔಟ್​ ತಾಣಗಳಲ್ಲಿ ಒಂದಾಗಿತ್ತು. ಒಟ್ಟಿಗೆ ಅಲ್ಲಿ ಕುಳಿತು ಹರಟುತ್ತಿದ್ದರು. ಆದರೆ, ಸ್ಥಳೀಯರಿಗೆ ಇದು ಇಷ್ಟವಾಗಲಿಲ್ಲ. ಅದಕ್ಕವರು ಬಸ್​ ನಿಲ್ದಾಣದಲ್ಲಿ ಬೆಂಚ್​ ಅನ್ನು ಮೂರು ಭಾಗವಾಗಿ ವಿಭಜಿಸಿದ್ದರು.

ಈ ಪ್ರದೇಶದ ನಿವಾಸಿಗಳ ಸಂಘದಿಂದ ಬಸ್​ ತಂಗುದಾಣ ಸ್ಥಾಪಿಸಲಾಗಿದ್ದು, ವಿದ್ಯಾರ್ಥಿಗಳು ಇಲ್ಲಿ ಒಟ್ಟಿಗೆ ಸಾಕಷ್ಟು ಸಮಯ ಕಳೆಯುತ್ತಿದ್ದರು. ಆದರೆ ಹುಡುಗಿಯರು ಮತ್ತು ಹುಡುಗರು ಒಟ್ಟಿಗೆ ಇದ್ದಾಗ ಸ್ಥಳೀಯರು ಕೋಪಗೊಂಡ ನಿದರ್ಶನಗಳಿವೆ. ವಿದ್ಯಾರ್ಥಿಗಳ ವಿರುದ್ಧ ಒಂದೆರೆಡು ಬಾರಿ ಪೊಲೀಸ್​ ಠಾಣೆಯಲ್ಲಿ ದೂರುಗಳು ದಾಖಲಾಗಿವೆ.

ಈ ನಡುವೆ ಬೆಂಚ್​ ಅನ್ನು ಮೂರು ಭಾಗವಾಗಿ ವಿಭಜಿಸಿದ್ದರ ವಿರುದ್ಧ ಪ್ರತಿರೋಧ ತೋರಿಸಿದ ಕಾಲೇಜು ವಿದ್ಯಾರ್ಥಿಗಳು ಮೂರು ಆಸನದಲ್ಲಿ ಒಬ್ಬರ ಮೇಲೊಬ್ಬರು ಒಟ್ಟಿಗೆ ಕುಳಿತು ಫೋಟೋ ಸೆರೆ ಹಿಡಿದಿದ್ದಾರೆ. ಆ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ.

ಬೇಂಚ್​ ಬೇರ್ಪಡಿಸಿರುವ ಬೆಳವಣಿಗೆಯಿಂದ ವಿದ್ಯಾರ್ಥಿಗಳು ಆಘಾತಕ್ಕೊಳಗಾಗಿದ್ದರು. ಜನರು ಇಂತಹ ಮನೋಭಾವ ಹೊಂದಿರುವುದು ತುಂಬಾ ದುರದೃಷ್ಟಕರ ಎಂದು ಕಾಲೇಜು ಯೂನಿಯನ್​ ಅಧ್ಯಕ್ಷ ಅಜ್ಮಲ್​ ತಿಳಿಸಿದ್ದಾರೆ.

ಆ ಫೋಟೋಗಳು ಅಧಿಕಾರಿಗಳ ಗಮನ ಸೆಳೆದಿವೆ. ಅಷ್ಟೇ ಅಲ್ಲದೇ ತಿರುವನಂತಪುರಂ ಮೇಯರ್​ ಆರ್ಯ ರಾಜೇಂದ್ರನ್​ ಗುರುವಾರ ಸ್ಥಳಕ್ಕೆ ಭೇಟಿ ನೀಡಿ, ವೈಫೈ ಸೌಲಭ್ಯದೊಂದಿಗೆ ಹೊಸ ಜೆಂಡರ್​ ನ್ಯೂಟ್ರಲ್​ ಬಸ್​ ನಿಲ್ದಾಣವನ್ನು ಸ್ಥಾಪಿಸಲಾಗುವುದು ಎಂದು ಘೋಷಿಸಿದ್ದಾರೆ.

ಮೇಯರ್​ ಅವರು ನಿವಾಸಿಗಳ ಸಂಘದೊಂದಿಗೆ ಈ ಬಗ್ಗೆ ವಿಚಾರಿಸಿದಾಗ, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಆಸನಗಳನ್ನು ಮೂರು ಭಾಗಗಳಾಗಿ ವಿಭಜಿಸಲಾಗಿದೆ ಎಂದು ಉತ್ತರ ಬಂದಿತ್ತು.

ಆದರೆ ಮೇಯರ್​ ಅವರು ಸೀಟನ್ನು ಮೂರು ಭಾಗವಾಗಿ ಕತ್ತರಿಸಿರುವುದು ಸೂಕ್ತವಲ್ಲ ಎಂದಿದ್ದಾರೆ. ಹಾಗೆಯೇ ಪ್ರಗತಿಪರ ಸಮಾಜಕ್ಕೆ ಯೋಗ್ಯವಲ್ಲ. ನಮ್ಮ ದೇಶದಲ್ಲಿ ಹುಡುಗಿಯರು ಮತ್ತು ಹುಡುಗರು ಒಟ್ಟಿಗೆ ಕುಳಿತುಕೊಳ್ಳಲು ಯಾವುದೇ ನಿಷೇಧವಿಲ್ಲ. ಯಾರಾದರೂ ಹಾಗೆ ಭಾವಿಸಿದರೆ, ಅವರು ಯಾವುದೋ ಯುಗದಲ್ಲಿ ಬದುಕುತ್ತಿದ್ದಾರೆ ಎಂದು ಪರಿಗಣಿಸಬೇಕಾಗಿದೆ. ಈ ವಿಷಯದ ವಿರುದ್ಧ ಬಲವಾಗಿ ಪ್ರತಿಭಟಿಸಿದ ವಿದ್ಯಾರ್ಥಿಗಳನ್ನು ನಾನು ಅಭಿನಂದಿಸುತ್ತೇನೆ ಎಂದಿದ್ದಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...