alex Certify 1980 ರ ದಶಕದ ದೃಶ್ಯಗಳನ್ನು ಮರುಸೃಷ್ಟಿಸಿದ ಕಾಲೇಜು ವಿದ್ಯಾರ್ಥಿಗಳು; ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

1980 ರ ದಶಕದ ದೃಶ್ಯಗಳನ್ನು ಮರುಸೃಷ್ಟಿಸಿದ ಕಾಲೇಜು ವಿದ್ಯಾರ್ಥಿಗಳು; ವಿಡಿಯೋ ವೈರಲ್

1980ರ ದಶಕದ ರೆಟ್ರೊ ವೈಬ್‌ ಒಳಗೊಂಡ ಕೇರಳ ಕಾಲೇಜು ವಿದ್ಯಾರ್ಥಿಗಳು ರಚಿಸಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇಡುಕ್ಕಿಯ ಮೂಲಮಟ್ಟಂನಲ್ಲಿರುವ ಸೇಂಟ್ ಜೋಸೆಫ್ ಕಾಲೇಜಿಗೆ ಸೇರಿದ ವಿದ್ಯಾರ್ಥಿಗಳು ಹಳೆಯ ಘಟನೆ, ಸನ್ನಿವೇಶ ರೀವೈಂಡ್ ಮಾಡುವ ಪ್ರಯತ್ನ ಮಾಡಿದ್ದರು.

‘ಸ್ಮೃತಿಯೋರಂ’ ಎಂಬ ಕಾಲ್ಪನಿಕ ಸ್ಥಳ ಸೃಷ್ಟಿಸಿದ್ದಾರೆ. ಈ ಕಲ್ಪನೆಯನ್ನು ಸಂಸ್ಥೆಯ ಮಾಸ್ಟರ್ ಆಫ್ ಸೋಶಿಯಲ್ ವರ್ಕ್ ವಿದ್ಯಾರ್ಥಿಗಳು ಪಿಚ್ ಮಾಡಿದ್ದಾರೆ. ಅದರ ವಿಡಿಯೊವನ್ನು ಕಾಲೇಜು ಹಳೆಯ ವಿದ್ಯಾರ್ಥಿಯೊಬ್ಬರು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.

ದಕ್ಷಿಣ ಭಾರತದ ಸಾಂಪ್ರದಾಯಿಕ ವೇಷಭೂಷಣವನ್ನು ಧರಿಸಿರುವ ಮಹಿಳೆಯನ್ನು ತೋರಿಸುವುದರೊಂದಿಗೆ ಕ್ಲಿಪ್ ಪ್ರಾರಂಭವಾಗುತ್ತದೆ, ಅವರು 5 ರೂ.ಗೆ ಮಜ್ಜಿಗೆ ಮಾರಾಟ ಮಾಡುತ್ತಾರೆ. ಮುಂದೆ ಯುವಕರ ಗುಂಪೊಂದು ಮರದ ನೆರಳಿನಲ್ಲಿ ಇಸ್ಪೀಟ್ ಆಡುವುದು, ಈ ವೇಳೆ ಬಲೂನ್ ಮಾರಾಟಗಾರನು ಹಾದುಹೋಗುತ್ತಾನೆ. ಕಾಲೇಜು ವಿದ್ಯಾರ್ಥಿಗಳು ಗ್ಲಾಸ್‌ಗಳು ಮತ್ತು ಪ್ಲೇಟ್‌ಗಳು ಸೇರಿದಂತೆ ರೆಟ್ರೊ ಕಾಲ್ಪನಿಕ ಹೋಟೆಲ್ ಅನ್ನು ಸಹ ನಿರ್ಮಿಸಿದ್ದರು.

1980 ರ ರೆಟ್ರೋ ಯುಗವನ್ನು ಗುರುತಿಸಲು, ಬ್ಲಾಕ್‌ಬಸ್ಟರ್ ಚಲನಚಿತ್ರ ಕೋಲಿಲಕ್ಕಂನ ಪೋಸ್ಟರ್ ಗೋಡೆಗಳ ಮೇಲೆ ಹಾಕಲಾಗಿತ್ತು. ಅಲ್ಲಿ ವಿದ್ಯಾರ್ಥಿಗಳು, ದಂಪತಿ, ಮೀನು ಮಾರಾಟಗಾರರು ಬಸ್‌ಗಾಗಿ ರಸ್ತೆಯಲ್ಲಿ ಕಾಯುತ್ತಿರುವ ದೃಶ್ಯ ಕಂಡು ಬರುತ್ತದೆ.

ಕುರುಕನಮೂಲದಲ್ಲಿರುವ ತಂಕಮಣಿ ಟಾಕೀಸ್ ಎಂಬ ಥಿಯೇಟರ್ ಬೋರ್ಡ್ ಕಾಣಿಸುತ್ತದೆ. ಕೊನೆಯಲ್ಲಿ, ಒಬ್ಬ ಕುಡುಕನು ಚಿತ್ರಮಂದಿರದ ಹೊರಗೆ ಕೂಗುತ್ತಾ ನಿಂತಿದ್ದನ್ನು ತೋರಿಸಲಾಗಿದೆ. ಪೋಲೀಸರು ಬಂಧಿಸಿರುವ ಕಳ್ಳ, ಜ್ಯೋತಿಷಿಯ ಮತ್ತು ಕುಡಿಯುವ ನೀರಿನ ವಿಷಯದಲ್ಲಿ ಮಹಿಳೆಯರು ಜಗಳವಾಡುವುದು ಸೇರಿದಂತೆ ಪಾತ್ರಗಳನ್ನು ಸೇರಿಸಿ ಕಾಲ್ಪನಿಕ ಸೃಷ್ಟಿ ಹೆಚ್ಚು ನಂಬುವಂತೆ ಮಾಡುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...