ತಿರುವನಂತಪುರಂ: ದೇಶದಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ಅನೇಕ ರಾಜ್ಯಗಳು ಕ್ರಮಕೈಗೊಂಡಿದ್ದರೆ, ಕೇರಳದಲ್ಲಿ ಕ್ಯಾಥೋಲಿಕ್ ಚರ್ಚ್ ವೊಂದು ಹೆಚ್ಚು ಮಕ್ಕಳಿದ್ದವರಿಗೆ ನಾನಾ ರೀತಿಯ ಕೊಡುಗೆ ಘೋಷಿಸಿದೆ.
ನಾಲ್ಕಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ ಕುಟುಂಬಕ್ಕೆ ಪ್ರತಿ ತಿಂಗಳು 2000 ರೂಪಾಯಿ ನೀಡಲಾಗುತ್ತದೆ. ನಾಲ್ಕನೇ ಮಗುವಿನ ಹೆರಿಗೆಗೂ ಹಣಕಾಸು ನೆರವು ಒದಗಿಸಲಾಗುವುದು. ಉದ್ಯೋಗ ಮತ್ತು ಶಾಲಾ ಪ್ರವೇಶದಲ್ಲಿ ಕುಟುಂಬಗಳಿಗೆ ಆದ್ಯತೆ ನೀಡಲಾಗುತ್ತದೆ. ಆಧ್ಯಾತ್ಮಿಕ ಅಗತ್ಯತೆ ಪೂರೈಸಲು ಫಾದರ್ ಮತ್ತು ದಾದಿಯರ ಸೇವೆಯನ್ನು ಒದಗಿಸಲಾಗುವುದು.
ಸಿರೋ ಮಲಬಾರ್ ಧರ್ಮಪ್ರಾಂತ್ಯದ ವ್ಯಾಪ್ತಿಯಲ್ಲಿ ದೊಡ್ಡ ಕುಟುಂಬಗಳಿಗೆ ಈ ಕೊಡುಗೆ ನೀಡಲಾಗುವುದು ಎಂದು ಪಟ್ಟಣಂತಿಟ್ಟದಲ್ಲಿರುವ ಸಿರೋ ಮಲಂಕರ ಕ್ಯಾಥೋಲಿಕ್ ಚರ್ಚ್ ನ ಮುಖ್ಯ ಬಿಷಪ್ ಹೇಳಿದ್ದಾರೆ. ಇದಕ್ಕೆ ವಿರೋಧ ವ್ಯಕ್ತವಾಗಿದೆ ಎಂದು ಹೇಳಲಾಗಿದೆ.