ಉಕ್ರೇನ್‌ನಲ್ಲಿ ರಷ್ಯಾ ಕಡೆಯಿಂದ ಹೆಚ್ಚುತ್ತಿರುವ ಆಕ್ರಮಣದ ನಡುವೆ ವಿವಿಧ ದೇಶಗಳು ಮಾಸ್ಕೋ ಮೇಲೆ ನಿರ್ಬಂಧ ಹೇರುತ್ತಿವೆ. ಹಲವಾರು ಸಣ್ಣ ಸಂಸ್ಥೆಗಳು ತಮ್ಮದೇ ಆದ ರೀತಿಯಲ್ಲಿ ಯುದ್ಧಕ್ಕೆ ವಿರೋಧ ವ್ಯಕ್ತಪಡಿಸಿವೆ.
ಕೇರಳದ ಕೆಫೆಯೊಂದು ಈಗ ರಷ್ಯಾದ ಸಲಾಡ್ ಅನ್ನು ಮೆನು ಪಟ್ಟಿಯಿಂದ ಕೈಬಿಟ್ಟಿರುವುದಾಗಿ ಘೋಷಿಸಿದೆ.
ಉಕ್ರೇನ್‌ನ ಜನರೊಂದಿಗೆ ನಾವಿದ್ದೇವೆ, ನಾವು ನಮ್ಮ ಮೆನುವಿನಿಂದ ‘ರಷ್ಯನ್ ಸಲಾಡ್’ ಅನ್ನು ತೆಗೆದುಹಾಕಿದ್ದೇವೆ ಎಂದು ಫೋರ್ಟ್ ಕೊಚ್ಚಿಯಲ್ಲಿರುವ ಕಾಶಿ ಆರ್ಟ್ ಕೆಫೆ ಮತ್ತು ಗ್ಯಾಲರಿಯ ಹೊರಗೆ ಪೋಸ್ಟ್ ಹಾಕಲಾಗಿದೆ..
ಬೆಚ್ಚಿಬೀಳಿಸುತ್ತೆ ಈ ಸುದ್ದಿ: 5 ವರ್ಷದ ವಿದ್ಯಾರ್ಥಿಯಿಂದ ಹಲ್ಲೆಗೊಳಗಾದ ಶಿಕ್ಷಕಿ ಆಸ್ಪತ್ರೆಗೆ ದಾಖಲು
ಈ ಸಂದೇಶ ಬೋರ್ಡ್‌ನ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ನೂರಾರು ಮಂದಿ ಪ್ರತಿಕ್ರಿಯೆ ನೀಡಿದ್ದಾರೆ.
ಈ ಕೆಫೆಯ ಮಾಲೀಕ ಎಡ್ಗರ್ ಪಿಂಟೊ, ಮಾನವೀಯತೆ ಮೇಲುಗೈ ಸಾಧಿಸಬೇಕೆಂದು ನಾವು ಬಯಸುತ್ತೇವೆ ಮತ್ತು ರಷ್ಯಾದಿಂದ ಅಮಾಯಕ ಜನರ ಮೇಲೆ ನಡೆಸುತ್ತಿರುವ ದಾಳಿಯನ್ನು ಖಂಡಿಸುತ್ತೇವೆ ಎಂದಿದ್ದಾರೆ.
ಇದು ಯಾವುದೇ ರೀತಿಯ ಪ್ರಚಾರವಲ್ಲ, ನಾವು ಯುದ್ಧ ಬೇಡವೆಂದು ಹೇಳಲು ಬಯಸಿದ್ದೇವೆ. ಕಲಾಭಿಮಾನಿಗಳಾಗಿರುವ ನಾವು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಂಬುತ್ತೇವೆ, ಉಕ್ರೇನ್‌ನಲ್ಲಿರುವ ಜನರಿಗೆ ನಮ್ಮ ಬೆಂಬಲ ತೋರಿಸಬಹುದು ಎಂದು ಭಾವಿಸಿದ್ದೇವೆ ಎಂದು ಅವರು ಹೇಳಿಕೊಂಡಿದ್ದಾರೆ.
ಕೆಲವರು ಈ ಕ್ರಮವನ್ನು ಬೆಂಬಲಿಸಿದರೆ, ಇನ್ನು ಕೆಲವರು ರಷ್ಯಾ ಹೆಸರಿನ ಎಲ್ಲವನ್ನೂ ಬಹಿಷ್ಕರಿಸುವುದು ಹಾಸ್ಯಾಸ್ಪದ ಎಂದು ಭಾವಿಸಿದ್ದಾರೆ.