
ಅಬಕಾರಿ ಅಧಿಕಾರಿಗಳ ವಸತಿ ಸಮುಚ್ಚಯದಲ್ಲಿ ಕೊಳೆತ ಸ್ಥಿತಿಯಲ್ಲಿ ಮೂರು ಶವಗಳು ಪತ್ತೆಯಾಗಿರುವ ಘಟನೆ ಕೇರಳದಲ್ಲಿ ನಡೆದಿದೆ.
ಕೇರಳದ ಕೊಚ್ಚಿಯಲ್ಲಿರುವ ಕೇಂದ್ರ ಅಬಕಾರಿ ಅಧಿಕಾರಿಗಳ ವಸತಿ ಕಟ್ಟದಲ್ಲಿ ಈ ಘಟನೆ ನಡೆದಿದೆ. ಹಿರಿಯ ಅಧಿಕಾರಿ ಹಾಗೂ ಅವರ ಕುಟುಂಬದ ಶವ ಎಂದು ತಿಳಿದುಬಂದಿದೆ.
ಮೃತರನ್ನು ಹಿರಿಯ ಕಸ್ಟಮ್ಸ್ ಅಧಿಕಾರಿ, ಅವರ ಸಹೋದರಿ ಹಾಗೂ ತಾಯಿ ಎಂದು ಶಂಕಿಸಲಾಗಿದೆ. ಮೂವರು ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ಶವಗಳ ಗುರುತು ಸಿಗದಷ್ಟರಮಟ್ಟಿಗೆ ಕೊಳೆತು ಹೋಗಿದೆ.
ಅಧಿಕಾರಿಯೊಬ್ಬರು ಹಲವು ದಿನಗಳಿಂದ ಕಚೇರಿಗೆ ಬಂದಿರಲಿಲ್ಲ. ಸಂಪರ್ಕಕ್ಕೂ ಸಿಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಸಿಬ್ಬಂದಿಗಳು ಅವರ ಮನೆ ಬಳಿ ಹೋಗಿ ನೋಡಿದಾಗ ಮನೆ ಲಾಕ್ ಆಗಿತ್ತು. ಆದರೆ ಮನೆ ಬಳಿ ದುರ್ವಾಸನೆ ಬರುತ್ತಿತ್ತು. ಕಿಟಕಿ ತೆಗೆದು ನೋಡಿದಾಗ ಶವವೊಂದು ನೇತಾಡುತ್ತಿತ್ತು. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದರು. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮನೆ ಪರುಶೀಲಿಸಿದಾಗ ಎರಡು ಕೋಣೆಗಳಲ್ಲಿ ಎರಡು ಸವ, ಹಾಲ್ ನಲ್ಲಿ ಒಂದು ಶವ ಪತ್ತೆಯಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.