ಮಂಡ್ಯ: ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಧ್ವಜ ವಿವಾದ ಪ್ರಕರಣಗಳ ನಡುವೆ ಇದೀಗ ಜಿಲ್ಲಾಡಳಿತ ಪೊಲೀಸ್ ಭದ್ರತೆಯಲ್ಲಿ ನೂತನ ಧ್ವಜಾರೋಹಣ ನೆರವೇರಿಸಿದೆ.
ವಿವಾದಿತ ಅರ್ಜುನ ಧ್ವಜಸ್ತಂಭದಲ್ಲಿ ಹಾರಿಸಲಾಗಿದ್ದ ತ್ರಿವರ್ಣ ಧ್ವಜವನ್ನು ಕೆಳಗಿಳಿಸಿ ಹೊಸ ತ್ರಿವರ್ಣ ಧ್ವಜವನ್ನು ಹಾರಿಸಿದೆ.
ಕಳೆದ ಜನವರಿಯಲ್ಲಿ ಅರ್ಜುನ ಧ್ವಜಸ್ತಂಭದಲ್ಲಿ ಹಾರಿಸಿದ್ದ ಹನುಮಧ್ವಜವನ್ನು ತೆಗೆದು ರಾಷ್ಟ್ರಧ್ವಜವನ್ನು ಜಿಲ್ಲಾಡಳಿತ ಹಾರಿಸಿತ್ತು. ಹನುಮಧ್ವಜ ತೆರವು ಮಾಡಿರುವ ಘಟನೆ ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಅಂದು 108 ಅಡಿ ಅರ್ಜುನ ಸ್ತಂಭಕ್ಕೆ ಚಿಕ್ಕ ರಾಷ್ಟ್ರಧ್ವಜ ಹಾರಿಸಲಾಗಿತ್ತು. ಚಿಕ್ಕ ಧ್ವಜ ಹಾರಿಸಿದ್ದೂ ಕೂಡ ವಿವಾದವಾಗಿತ್ತು. ಇದೀಗ ಜಿಲ್ಲಾಡಳಿತ ಹಳೆಯ ತ್ರಿವರ್ಣಧ್ವಜ ತೆಗೆದು ಹೊಸ ಬೃಹತ್ ಧ್ವಜವನ್ನು ಹಾರಿಸಿದೆ.