ಕೇವಲ ಎರಡು ತಿಂಗಳ ಹಿಂದೆ $1 ಮಿಲಿಯನ್ ಲಾಟರಿ ಬಹುಮಾನವನ್ನು ಗೆದ್ದ ನಂತರ, ಅಮೆರಿಕದ ಮಹಿಳೆಯೊಬ್ಬಳು ಮತ್ತೊಮ್ಮೆ ಅದೃಷ್ಟವನ್ನು ಪ್ರಯತ್ನಿಸಿದಾಗ ಸ್ಕ್ರ್ಯಾಚ್ ಆಫ್ ಟಿಕೆಟ್ಗಳಲ್ಲಿ $2 ಮಿಲಿಯನ್ ಗೆದ್ದಿದ್ದಾಳೆ !
ಉತ್ತರ ಕೆರೊಲಿನಾದ ಶೆಲ್ಬಿಯ ಕೀನ್ಯಾ ಸ್ಲೋನ್ ಎಂಬ 41 ವರ್ಷದ ಮಹಿಳೆ ಫುಡ್ ಮಾರ್ಟ್ನಲ್ಲಿದ್ದಾಗ ಮೊದಲ ಬಾರಿಗೆ $20 ಡೈಮಂಡ್ ಡ್ಯಾಜ್ಲರ್ ಟಿಕೆಟ್ ಖರೀದಿಸಿದ್ದಳು. ಆಗ ಆಕೆಗೆ ಒಂದು ಮಿಲಿಯನ್ ಡಾಲರ್ ಅಂದರೆ ಸುಮಾರು ಆರೂವರೆ ಕೋಟಿ ರೂಪಾಯಿ ಸಿಕ್ಕಿತ್ತು.
ಈಗ ಮತ್ತೊಮ್ಮೆ ಅದೃಷ್ಟ ಪರೀಕ್ಷಿಸಿದರೆ ಡಬಲ್ ಗೆದ್ದಿದ್ದಾಳೆ. ನಂಬಲಸಾಧ್ಯವಾದ ಲಾಟರಿ ಬಹುಮಾನದಿಂದ ಖುದ್ದು ಮಹಿಳೆ ದಿಗ್ಭ್ರಮೆಗೊಂಡಿದ್ದಾಳೆ!
“ನಾನು ಶಾಕ್ನಿಂದ ಮೂಕವಿಸ್ಮಿತಳಾಗಿದ್ದೇನೆ. ನಾನು ಆಶೀರ್ವಾದ ಪಡೆದಿದ್ದೇನೆ. ನಾನು ಹೇಳಬೇಕಾಗಿರುವುದು ಇಷ್ಟೇ” ಎಂದು ಸ್ಲೋನ್ ಹೇಳಿದ್ದಾಳೆ.