
ಈ ಹಿಂದೆ ಏಪ್ರಿಲ್ ತಿಂಗಳಲ್ಲಿ ಪ್ರವೇಶಾತಿಗೆ ಆಯ್ಕೆ ಪಟ್ಟಿ ಹೊರಡಿಸಲಾಗಿತ್ತು. ಆದರೆ ಕೊರೊನಾದಿಂದಾಗಿ ಇದು ಮುಂದೂಡಿಕೆಯಾಗಿತ್ತು. ಇದೀಗ ಹೊಸ ವೇಳಾಪಟ್ಟಿಯನ್ನ ಜೂನ್ 23ರಂದು ಬಿಡುಗಡೆ ಮಾಡೋದಾಗಿ ಕೇಂದ್ರೀಯ ವಿದ್ಯಾಲಯ ಹೇಳಿದೆ.
ಕೇಂದ್ರೀಯ ವಿದ್ಯಾಲಯ ಸಂಘಟನೆಯು ಬಿಡುಗಡೆ ಮಾಡುವ ಪಟ್ಟಿಯಲ್ಲಿ ಪ್ರಕಟವಾದ ಹೆಸರು ಇರುವ ವಿದ್ಯಾರ್ಥಿಗಳು ಸೀಟನ್ನ ಕಾಯ್ದಿರಿಸಬಹುದಾಗಿದೆ. ಆಸನಗಳನ್ನ ಕಾಯ್ದಿರಿಸಲು ಪೋಷಕರು ದಾಖಲೆಗಳನ್ನ ಸಲ್ಲಿಸಿ ಶುಲ್ಕವನ್ನ ಪಾವತಿ ಮಾಡಬೇಕಾಗುತ್ತದೆ.
ಕೆವಿಎಸ್ ದಾಖಲಾತಿಗಾಗಿ ಬೇಕಾಗುವ ದಾಖಲೆಗಳು :
– ಮಗುವಿನ ಜನನ ಪ್ರಮಾಣ ಪತ್ರದ ಸ್ಕ್ಯಾನ್ ಕಾಪಿ
– ದಾಖಲೆ ಹೊಂದಲಿರುವ ಮಗುವಿನ ಭಾವಚಿತ್ರ
-ಪೋಷಕರು ಆರ್ಥಿಕವಾಗಿ ದುರ್ಬಲರಾಗಿದ್ದರೆ ಆದಾಯ ಪ್ರಮಾಣ ಪತ್ರ
ಜೂನ್ 23ರಂದು ಪ್ರಕಟವಾಗುವ ಪಟ್ಟಿಯಲ್ಲಿ ನಿಮ್ಮ ಮಗುವಿನ ಹೆಸರು ಕಾಣಿಸದೇ ಇದ್ದಲ್ಲಿ ನೀವು ಎರಡನೆ ಆಯ್ಕೆ ಪಟ್ಟಿ ಬಿಡುಗಡೆ ಮಾಡುವವರೆಗೂ ಕಾಯಬೇಕಾಗುತ್ತದೆ.
ಕೇಂದ್ರೀಯ ವಿದ್ಯಾಲಯಗಳಲ್ಲಿ 1ನೇ ತರಗತಿಗೆ ಒಟ್ಟು 1247 ಸೀಟುಗಳು ಇವೆ. ಇದರಲ್ಲಿ 15 ಪ್ರತಿಶತ ಸೀಟುಗಳು ಎಸ್ಸಿ, 7.5 ಪ್ರತಿಶತ ಎಸ್ಟಿ, 27 ಪ್ರತಿಶತ ಓಬಿಸಿ ಹಾಗೂ 15 ಪ್ರತಿಶತ ಸೀಟು ಆರ್ಟಿಇಗೆ ಮೀಸಲಿಡಲಾಗಿದೆ.