ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮುಂಜಾನೆಯಿಂದ ಮಂಜು ಕವಿದ ವಾತಾವಾರಣವಿದ್ದು, ವಿಮಾನಗಳ ಹಾರಾಟದಲ್ಲಿ ಭಾರಿ ವ್ಯತ್ಯಯವುಂಟಾಗಿದೆ.
ಏರ್ ಪೋರ್ಟ್ ನಲ್ಲಿ ಬೆಳಿಗ್ಗೆಯಿಂದ ದಟ್ಟವಾದ ಮಂಜುಮುಸುಕಿರುವ ಹಿನ್ನೆಲೆಯಲ್ಲಿ ಲೋಹದ ಹಕ್ಕಿಗಳ ಹಾರಾಟಕ್ಕೆ ಅಡೆತಡೆಯುಂಟಾಗಿದೆ. ಪ್ರಯಾಣಿಕರು ಪರದಾಡುವಂತಾಗಿದೆ. 10ಕ್ಕೂ ಹೆಚ್ಚು ವಿಮಾನಗಳ ಟೇಕಾಫ್ , ಲ್ಯಾಂಡಿಂಗ್ ನಲ್ಲಿ ವ್ಯತ್ಯಯವಾಗಿದೆ.
ಏರ್ ಪೋರ್ಟ್ ಹಾಗೂ ಸುತ್ತಮುತ್ತ ಸಂಪೂರ್ಣವಾಗಿ ದಟ್ಟ ಮಂಜಿನಿಂದ ಆವೃತಗೊಂಡಿದ್ದು, ಗೋಚರತೆಯಲ್ಲಿ ಸ್ಪಷ್ಟತೆ ಇಲ್ಲದೇ ಹಲವು ವಿಮಾನಗಳು ಲ್ಯಾಂಡ್ ಮಾಡಲಾಗದೇ ವಾಪಾಸ್ ತೆರಳಿವೆ. ಕೆಐಎದಲ್ಲಿ ಲ್ಯಾಂಡ್ ಆಗಬೇಕಿದ್ದ ಇಂಡಿಗೋ ವಿಮಾನವೊಂದು ದಟ್ಟ ಮಂಜಿನಿಂದಾಗಿ ಲ್ಯಾಂಡ್ ಮಾಡಲು ಸಾಧ್ಯವಾಗದೇ 45 ನಿಮಿಷಗಳ ಕಾಲ ಆಗಸದಲ್ಲಿಯೇ ಹಾರಾಟ ನಡೆಸಿದೆ. ಆದಾಗ್ಯೂ ವಾತಾವರಣ ಸುದಾರಿಸಿದ ಕಾರಣಕ್ಕೆ ಹೈದರಾಬದ್ ಏರ್ ಪೋರ್ಟ್ ಗೆ ಹಿಂತಿರುಗಿದೆ. ಇದರಿಂದಾಗಿ ಪ್ರಯಾಣಿಕರು ಸಂಕಷ್ಟ ಪಡುವ ಸ್ಥಿತಿಯುಂಟಾಗಿದೆ.
ಕೆಐಎನಲ್ಲಿ ಮಂಜು ಕವಿದ ವಾತಾವರಣದಿಂದಾಗಿ 5 ವಿಮಾನಗಳನ್ನು ಡೈವರ್ಟ್ ಮಾಡಲಾಗಿದೆ ಎಂದು ತಿಳಿದುಬಂದಿದೆ.