ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಕರೆ ಬಂದಿದ್ದು, ಏರ್ ಪೋರ್ಟ್ ನ ಕಮಾಂಡ್ ಸೆಂಟರ್ ಗೆ ಬೆದರಿಕೆ ಸಂದೇಶ ರವಾನಿಸಲಾಗಿದೆ.
ಅನಾಮಧೇಯ ಟ್ವೀಟ್ ಮೂಲಕ ಬಾಂಬ್ ಬೆದರಿಕೆ ಬಂದಿದ್ದು, ವಿವಿಧ ಏರ್ ಪೋರ್ಟ್ ಗಳಿಂದ ತೆರಳಿರುವ 6 ವಿಮಾನಗಳಲ್ಲಿ ಬಾಂಬ್ ಇಡಲಾಗಿದ್ದು, ಒಟ್ಟು 12 ಬಾಂಬರ್ ಗಳು ವಿಮಾನದಲ್ಲಿ ಇರುವುದಾಗಿ ಸಂದೇಶ ರವಾನಿಸಲಾಗಿದೆ.
ಮಂಗಳೂರು-ದುಬೈ, ತಿರುವನಂತಪುರಂ-ಮಸ್ಕಟ್ ವಿಮಾನ ಸೇರಿದಂತೆ 6 ವಿಮಾನಗಳಲ್ಲಿ ಇಬ್ಬರು ಬಾಂಬರ್ ಗಳಂತೆ ಒಟ್ಟು 12 ಬಾಂಬರ್ ಗಳು ಇದ್ದಾರೆ ಎಂದು ಟ್ವೀಟ್ ಮೂಲಕ ತಿಳಿಸಲಾಗಿದೆ.
ಇಂಡಿಗೋ ಏರ್ ಲೈನ್ಸ್ ನ IX233, IX 375, IX 383, IX 549, IX 399 ವಿಮಾನಗಳಲ್ಲಿ ಬಾಂಬ್ ಇಡಲಾಗಿದೆ ಎಂದು ಅಮಾನಧೇಯ ಟ್ವೀಟ್ ಮೂಲಕ ಬೆದರಿಕೆ ಸಂದೇಶ ಬಂದಿದೆ. ಬಾಂಬ್ ಬೆದರಿಕೆ ಸಂದೇಶ ಬೆನ್ನಲ್ಲೇ ಏರ್ ಪೋರ್ಟ್ ಭದ್ರತಾ ಸಿಬ್ಬಂದಿ ಹಾಗೂ ಪೊಲೀಸರು, ಬಾಂಬ್ ನಿಷ್ಕ್ರಿಯ ದಳದಿಂದ ತಪಾಸಣೆ ನಡೆಸಲಾಗಿದೆ.