ಬೆಂಗಳೂರು: ಚಲಿಸುತ್ತಿದ್ದ ವಿಮಾನದಲ್ಲಿ ಪ್ರಯಾಣಿಕ ಅನುಚಿತ ವರ್ತನೆ ತೋರಿದ ಘಟನೆ ದೆಹಲಿಯಿಂದ ಬೆಂಗಳೂರಿಗೆ ಬರುತ್ತಿದ್ದ ಇಂಡಿಗೋ ವಿಮಾನದಲ್ಲಿ ಘಟನೆ ನಡೆದಿದೆ.
ಮದ್ಯದ ಅಮಲಿನಲ್ಲಿ ಅನುಚಿತ ವರ್ತನೆ ತೋರಿದ ಪ್ರಯಾಣಿಕನನ್ನು ಬಂಧಿಸಲಾಗಿದೆ. ಪ್ರತೀಕ್ ಬಂಧಿತ ಆರೋಪಿ. ಕೆಂಪೇಗೌಡ ಏರ್ಪೋರ್ಟ್ ಠಾಣೆ ಪೊಲೀಸರು ಆರೋಪಿ ಪ್ರತೀಕ್ ನನ್ನು ಬಂಧಿಸಿದ್ದಾರೆ. ಸಹ ಪ್ರಯಾಣಿಕನೊಂದಿಗೆ ಪ್ರತೀಕ್ ಗಲಾಟೆ ಮಾಡಿಕೊಂಡಿದ್ದ. ಗಲಾಟೆಯ ವೇಳೆ ಎಕ್ಸಿಟ್ ಡೋರ್ ಓಪನ್ ಮಾಡಲು ಯತ್ನಿಸಿದ್ದ. ಚಲಿಸುತ್ತಿದ್ದ ವಿಮಾನದಲ್ಲಿ ಪ್ರಯಾಣಿಕ ಪ್ರತೀಕ್ ಆತಂಕ ಸೃಷ್ಟಿಸಿದ ಹಿನ್ನಲೆಯಲ್ಲಿ ಬಂಧಿಸಲಾಗಿದೆ.