ಅಂದಾಜು 3 ಲಕ್ಷ ಪ್ರಯಾಣಿಕರನ್ನು ಸಾಗಿಸುವ ಉದ್ದೇಶದಿಂದ ನಿರ್ಮಾಣವಾಗುತ್ತಿರುವ ಬೆಂಗಳೂರಿನ ಏರ್ಪೋರ್ಟ್ ಮೆಟ್ರೋ ಸೇವೆ 2026ರ ವೇಳೆ ಸಾರ್ವಜನಿಕರ ಸೇವೆಗೆ ಸಿದ್ಧವಾಗಲಿದೆ. ಈ ಮಾರ್ಗದಲ್ಲಿ ರೈಲು ಚಲಿಸುವ ವೇಗವನ್ನು ದ್ವಿಗುಣಗೊಳಿಸುವ ಬಗ್ಗೆಯೂ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.
ಬೇರೆಲ್ಲ ಮಾರ್ಗಗಳಲ್ಲಿ ಚಲಿಸುವ ಮೆಟ್ರೋ ರೈಲಿನ ವೇಗಕ್ಕಿಂತ ಯಲಹಂಕದಿಂದ ಏರ್ಪೋರ್ಟ್ ಟರ್ಮಿನಲ್ನಲ್ಲಿ ಸಂಚರಿಸುವ ಮೆಟ್ರೋದ ವೇಗವನ್ನು ದ್ವಿಗುಣಗೊಳಿಸಲು ಅಂದರೆ ಗಂಟೆಗೆ 60 ಕಿಲೋಮೀಟರ್ ವೇಗ ನಿಗದಿ ಮಾಡಲು ಬಿಎಂಆರ್ಸಿಎಲ್ ಮುಂದಾಗಿದೆ.
ಪ್ರಸ್ತುತ ಬಿಎಂಆರ್ಸಿಎಲ್ನ ಎಲ್ಲಾ ಮೆಟ್ರೋ ರೈಲುಗಳು ಗಂಟೆಗೆ 30 ಕಿಲೋಮೀಟರ್ ವೇಗದಲ್ಲಿ ಸಂಚರಿಸುತ್ತದೆ. ಆದರೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮಾರ್ಗದಲ್ಲಿ ಸಂಚರಿಸುವ ರೈಲುಗಳು ಮಾತ್ರ 60 ಕಿಲೋಮೀಟರ್ ಪ್ರತಿ ಗಂಟೆ ವೇಗದಲ್ಲಿ ಸಂಚರಿಸಲಿದೆ ಎಂದು ಯೋಜನಾ ವರದಿಯು ಮಾಹಿತಿ ನೀಡಿದೆ.
ವರ್ಗಾವಣೆ ಬಯಸಿದ್ದ 75 ಸಾವಿರ ಶಿಕ್ಷಕರಿಗೆ ಬಿಗ್ ಶಾಕ್
37 ಕಿಲೋಮೀಟರ್ ಉದ್ದದ ಮಾರ್ಗದಲ್ಲಿ 17 ನಿಲ್ದಾಣಗಳು ಇರಲಿವೆ. ಕಸ್ತೂರಿನಗರ, ಹೊರಮಾವು, ಹೆಚ್ಆರ್ಬಿಆರ್ ಲೇಔಟ್, ಕಲ್ಯಾಣ ನಗರ, ಹೆಚ್ಬಿಆರ್ ಲೇಔಟ್, ನಾಗವಾರ, ವೀರಣ್ಣ ಪಾಳ್ಯ, ಕೆಂಪಾಪುರ, ಹೆಬ್ಬಾಳ, ಕೊಡಿಗೆ ಹಳ್ಳಿ, ಜಕ್ಕೂರು ಕ್ರಾಸ್, ಯಲಹಂಕ, ಬಾಗಲೂರು ಕ್ರಾಸ್, ಬೆಟ್ಟಹಲಸೂರು, ಟ್ರಂಪೆಟ್ ಜಂಕ್ಷನ್, ಕೆಐಎ ವೆಸ್ಟ್, ಹಾಗೂ ಏರ್ಪೋರ್ಟ್ ಟರ್ಮಿನಲ್ನಲ್ಲಿ ನಿಲ್ದಾಣ ನಿರ್ಮಾಣವಾಗಲಿದೆ.