ಕೆಲವೊಂದು ವಸ್ತುಗಳನ್ನು ಮನೆಯಲ್ಲಿಟ್ಟುಕೊಂಡ್ರೆ ನೇರವಾಗಿ ಅಥವಾ ಪರೋಕ್ಷವಾಗಿ ಆರ್ಥಿಕ ನಷ್ಟವಾಗುತ್ತದೆ. ಕೆಲವೊಮ್ಮೆ ನಾವು ಕೊಂಡುಕೊಳ್ಳುವ ಮತ್ತು ಮನೆಯಲ್ಲಿ ಇಟ್ಟಿರುವ ವಸ್ತುಗಳು ಲಕ್ಷ್ಮಿದೇವಿಗೆ ಮುಜುಗರ ತರುತ್ತವೆ, ಇದರಿಂದ ನಮಗೆ ಧನಹಾನಿ ಉಂಟಾಗುತ್ತದೆ. ಇವು ನಕಾರಾತ್ಮಕತೆಯನ್ನು ಆಕರ್ಷಿಸುವುದರಿಂದ ಆರ್ಥಿಕ ನಷ್ಟ ಉಂಟಾಗುತ್ತದೆ, ಉದ್ಯಮದಲ್ಲೂ ನಷ್ಟವಾಗುತ್ತದೆ. ಹಣಕಾಸಿನ ನಷ್ಟವನ್ನು ತಪ್ಪಿಸಲು ವಾಸ್ತುಶಾಸ್ತ್ರದ ಪ್ರಕಾರ ಈ 6 ವಸ್ತುಗಳನ್ನು ಕೂಡಲೇ ಮನೆಯಿಂದ ಹೊರಹಾಕಬೇಕು.
ಪರಸ್ಪರ ಎದುರು ಬದುರಾಗಿರುವ ಮೂರ್ತಿಗಳು : ಈ ವಿಷಯ ಎಷ್ಟೋ ಜನರಿಗೆ ತಿಳಿದೇ ಇಲ್ಲ. ದೇವರ ಮೂರ್ತಿಗಳನ್ನು ಯಾವತ್ತೂ ಎದುರುಬದುರಾಗಿ ಇಡಬೇಡಿ. ಹಾಗೆ ಇಟ್ಟಲ್ಲಿ ನಿಮ್ಮ ಖರ್ಚು ಜಾಸ್ತಿಯಾಗಿ, ಆದಾಯ ಕಡಿಮೆಯಾಗುತ್ತದೆ.
ಕೆಲಸ ಮಾಡದೆ ನಿಂತ ಗಡಿಯಾರ : ಕೆಟ್ಟು ಹೋಗಿರುವ ಗಡಿಯಾರವನ್ನು ಮನೆಯಲ್ಲಿಟ್ಟುಕೊಳ್ಳಬೇಡಿ. ಅದು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಇದರಿಂದ ಆರ್ಥಿಕ ನಷ್ಟ ಉಂಟಾಗುತ್ತದೆ.
ಕೆಟ್ಟುಹೋಗಿರುವ ಎಲೆಕ್ಟ್ರಿಕಲ್ ಉಪಕರಣ : ಕೆಲಸ ಮಾಡದ, ಕೆಟ್ಟು ಹೋಗಿರುವ ಉಪಕರಣಗಳನ್ನು ಕೂಡ ಮನೆಯಲ್ಲಿಟ್ಟುಕೊಳ್ಳಬೇಡಿ. ಅವು ಕೂಡ ರುಣಾತ್ಮಕ ಎನರ್ಜಿಯನ್ನು ಆಕರ್ಷಿಸುತ್ತವೆ. ಕೆಟ್ಟು ಹೋಗಿರುವ ಟಿವಿ, ರೆಫ್ರಿಜರೇಟರ್, ಕಂಪ್ಯೂಟರ್ ಇವನ್ನೆಲ್ಲ ಮನೆಯಿಂದ ಹೊರಹಾಕಿ.
ಮುಳ್ಳುಗಳಿರುವ ಗಿಡಗಳು : ಮುಳ್ಳು ಇರುವ ಸಸ್ಯಗಳು, ಪೊದೆಗಳು ಮತ್ತು ಕಳ್ಳಿ ಗಿಡಗಳನ್ನು ಮನೆಯಲ್ಲಿಟ್ಟುಕೊಂಡರೆ ಆರ್ಥಿಕ ನಷ್ಟ ಉಂಟಾಗುತ್ತದೆ. ಅವನ್ನು ಯಾವಾಗಲೂ ಮನೆಯಿಂದ ಹೊರಗಡೆಯೇ ನೆಡುವುದು ಒಳ್ಳೆಯದು.
ಹಾನಿಗೊಳಗಾದ ಅಥವಾ ಮುರಿದು ಹೋಗಿರುವ ದೇವರ ಮೂರ್ತಿ : ಮುರಿದು ಹೋಗಿರುವ ಅಥವಾ ಹಾನಿಗೊಳಗಾಗಿರುವ ದೇವರ ಮೂರ್ತಿಯನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಆರ್ಥಿಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅಷ್ಟೇ ಅಲ್ಲ ಹರಿದು ಹೋಗಿರುವ ದೇವರ ಫೋಟೋ ಅಥವಾ ಪೋಸ್ಟರ್ ಗಳನ್ನು ಕೂಡ ತೆಗೆದು ಹಾಕಿ.
ಒಡೆದ ಕನ್ನಡಿ : ಮನೆಯಲ್ಲಿ ಒಡೆದ ಕನ್ನಡಿ ಅಥವಾ ಒಡೆದ ಗಾಜನ್ನು ಇಟ್ಟುಕೊಳ್ಳುವುದರಿಂದ್ಲೂ ಹಣಕಾಸಿನ ಸಮಸ್ಯೆ ಉದ್ಭವಿಸುತ್ತದೆ. ಹಾಗಾಗಿ ಯಾವುದೇ ಗಾಜು ಒಡೆದಿದ್ದರೂ ಅದನ್ನು ಕೂಡಲೇ ಬದಲಾಯಿಸಿ.