ಮೊಬೈಲ್ ಇಲ್ಲದೆ ಜೀವನವಿಲ್ಲ ಎನ್ನುವಂತಾಗಿದೆ. ಪ್ರತಿಯೊಬ್ಬರ ಕೈನಲ್ಲಿ ಮೊಬೈಲ್ ಓಡಾಡುತ್ತಿರುತ್ತದೆ. ಜನರಿಗೆ ಅತ್ಯಗತ್ಯ ಎನ್ನಿಸಿರುವ ಈ ಮೊಬೈಲ್ ಅನಾರೋಗ್ಯಕ್ಕೆ ಕಾರಣವಾಗ್ತಿದೆ. ಫರ್ಟಿಲಿಟಿ ತಜ್ಞರು ಜೇಬಿನಲ್ಲಿ ಮೊಬೈಲ್ ಇಟ್ಟುಕೊಂಡ್ರೆ ಆಗುವ ಸಮಸ್ಯೆಗಳು ಏನೇನು ಎಂಬುದನ್ನು ವಿವರಿಸಿದ್ದಾರೆ. ಈ ಹವ್ಯಾಸದಿಂದ ದೂರವಿರುವಂತೆ ಸಲಹೆ ನೀಡಿದ್ದಾರೆ.
ದಿನಕ್ಕೆ ಒಂದು ಗಂಟೆ ಮೊಬೈಲ್ ನಲ್ಲಿ ಮಾತನಾಡುವ ಪುರುಷರ ಲೈಂಗಿಕ ಸಾಮರ್ಥ್ಯ ಕಡಿಮೆಯಾಗುತ್ತದೆಯಂತೆ. ಹಾಗೆ ಪ್ಯಾಂಟ್ ಜೇಬಿನಲ್ಲಿ ಮೊಬೈಲ್ ಇಡುವುದು ಇನ್ನಷ್ಟು ಮಾರಕ. ಮೊಬೈಲ್ ವೀರ್ಯದ ಗುಣಮಟ್ಟವನ್ನು ಎಷ್ಟರ ಮಟ್ಟಿಗೆ ಕಡಿಮೆ ಮಾಡುತ್ತದೆಯೆಂದ್ರೆ ಊಹಿಸಲೂ ಸಾಧ್ಯವಿಲ್ಲ.
ಮೊಬೈಲ್ ವ್ಯಸನಿಗಳಲ್ಲಿ ಸಕ್ರಿಯ ವೀರ್ಯ ಹಾಗೂ ಗುಣಮಟ್ಟದ ವೀರ್ಯದ ಕೊರತೆ ಕಂಡು ಬರುತ್ತದೆಯಂತೆ. ಫೋನ್ ಹಾಗೂ ವಿದ್ಯುತ್ಕಾಂತೀಯ ಚಟುವಟಿಕೆ ವೀರ್ಯಾಣು ಮೇಲೆ ಪ್ರಭಾವ ಬೀರುತ್ತದೆ. ಅಧ್ಯಯನದ ಪ್ರಕಾರ ವರ್ಷವೊಂದಕ್ಕೆ 100ಕ್ಕೂ ಹೆಚ್ಚು ಪುರುಷರು ಮಕ್ಕಳನ್ನು ಪಡೆಯಲು ವಿಫಲರಾಗುತ್ತಿದ್ದು, ಚಿಕಿತ್ಸೆಗೆ ಬರುತ್ತಾರಂತೆ.