ಚಳಿಗಾಲದಲ್ಲಿ ತ್ವಚೆ ಬಹುಬೇಗ ಒಣಗುತ್ತದೆ. ತುಟಿಗಳು ಬಿರಿಯುತ್ತವೆ. ಕೂದಲು ಪೂರ್ತಿ ಡ್ರೈ ಆಗಿ ಆಕರ್ಷಣೆ ಕಳೆದುಕೊಳ್ಳುತ್ತವೆ. ಇದನ್ನೆಲ್ಲಾ ಸರಿಪಡಿಸಲು ಈ ಕೆಳಗಿನ ವಸ್ತುಗಳನ್ನು ನೀವು ಸದಾ ನಿಮ್ಮೊಂದಿಗೆ ಇಟ್ಟುಕೊಳ್ಳಿ.
ಸನ್ ಸ್ಕ್ರೀನ್ ಲೋಷನ್ ಸದಾ ನಿಮ್ಮ ಕೈಯಳತೆಯ ದೂರದಲ್ಲಿರಲಿ. ಇದನ್ನು ಹಚ್ಚಿಕೊಳ್ಳುವುದರಿಂದ ಸೂರ್ಯನ ಕಿರಣಗಳ ನೇರವಾದ ಹಾನಿಯನ್ನು ತಡೆಯಬಹುದು. ಸುಕ್ಕಿನ ಸಮಸ್ಯೆ ದೂರ ಮಾಡಬಹುದು. ಹಾಗಾಗಿ ಮನೆಯಲ್ಲಿ, ಕಚೇರಿಯಲ್ಲಿ ಹಾಗೂ ಬ್ಯಾಗ್ ನಲ್ಲಿ ಸದಾ ಈ ಲೋಷನ್ ಇಟ್ಟುಕೊಳ್ಳಿ.
ಲಿಪ್ ಬಾಮ್ ಹಾಗೂ ಲಿಪ್ ಸ್ಟಿಕ್ ಸದಾ ನಿಮ್ಮೊಂದಿಗಿರಲಿ. ಚಳಿಗಾಲದಲ್ಲಿ ಒಣ ಗಾಳಿಗೆ ನಿಮ್ಮ ತುಟಿ ಡ್ರೈ ಆಗಬಹುದು ಅಥವಾ ಬಿರುಕು ಬಿಡಬಹುದು. ಆಗ ಲಿಪ್ ಬಾಮ್ ನೆರವಿಗೆ ಬರುತ್ತದೆ.
ತಲೆಕೂದಲು ಒಣಗಿ ಹಾರಾಡುವ ಸಂದರ್ಭಕ್ಕೆ ಬಳಸುವಂತೆ ಸಣ್ಙ ಪ್ಯಾಕೆಟ್ ತೆಂಗಿನೆಣ್ಣೆಯೂ ನಿಮ್ಮ ಹತ್ತಿರದಲ್ಲಿರಲಿ. ಬಸ್ಸಿನಲ್ಲಿ ಪಯಣಸಿದಾಗ ಹಾರಾಡುವ ಕೂದಲನ್ನು ಸರಿಪಡಿಸಲು ಒಂದೆರಡು ಹನಿ ಎಣ್ಣೆ ತೆಗೆದು ತಲೆಗೆ ಹಚ್ಚಿಕೊಂಡರೆ ಬಾಚಲೂ ಸುಲಭ. ವಿಪರೀತ ಹಾರಾಡುವುದೂ ಇಲ್ಲ.
ಮಾಯಿಸ್ಚರೈಸರ್ ಕ್ರೀಮ್ ನಿಮ್ಮ ತ್ವಚೆಯನ್ನು ಆರೋಗ್ಯದಿಂದ ಇಡುತ್ತದೆ. ತ್ವಚೆಯ ಮೇಲೆ ಕೂರುವ ಧೂಳು, ಕೊಳೆ ಜಿಡ್ಡನ್ನು ದೂರಮಾಡುತ್ತದೆ. ಸೂಕ್ಷ್ಮ ತ್ವಚೆ ಹೊಂದಿರುವವರೂ ಅಡ್ಡ ಪರಿಣಾಮಗಳ ಭೀತಿ ಇಲ್ಲದೆ ಮಾಯಿಸ್ಚರೈಸರ್ ಬಳಸಬಹುದು.