ಚಳಿಗಾಲ ಆರಂಭವಾದರೆ ಸಾಕು ಚರ್ಮ ಕಾಂತಿ ಕಳೆದುಕೊಳ್ಳುತ್ತದೆ. ಬಿಸಿಲಿಗೆ ಹೋದರೆ ಚರ್ಮದ ಸಮಸ್ಯೆಗಳು ಶುರುವಾಗುತ್ತದೆ. ಚರ್ಮ ಮತ್ತು ತುಟಿಗಳು ಸುಕ್ಕಾಗುವುದು, ಒಡೆಯುವುದು ಸೇರಿದಂತೆ ಚಳಿಗಾಲದಲ್ಲಿ ಅನೇಕ ಸಾಮಾನ್ಯ ಸಮಸ್ಯೆ ಕಾಡುತ್ತದೆ.
ಚಳಿಗಾಲದಲ್ಲಿ ಮಹಿಳೆಯರು ತಮ್ಮ ಚರ್ಮದ ಆರೈಕೆಗೆ ಅನೇಕ ಕ್ರಮಗಳನ್ನು ಕೈಗೊಳ್ತಾರೆ. ಚಳಿಗಾಲದಲ್ಲಿ ಚರ್ಮದ ಆರೈಕೆಗೆ ಪರ್ಸ್ ನಲ್ಲಿ ಕೆಲವೊಂದು ವಸ್ತುಗಳನ್ನು ಇಟ್ಟುಕೊಂಡಿರಬೇಕು.
ಹ್ಯಾಂಡ್ ಲೋಶನ್ : ಚಳಿಗಾಲದಲ್ಲಿ ತಣ್ಣನೆಯ ಗಾಳಿಯಿಂದಾಗಿ ಚರ್ಮ ಶುಷ್ಕವಾಗುತ್ತದೆ. ಬೆರಳುಗಳ ಮಧ್ಯೆ ಚರ್ಮ ಎತ್ತಲು ಶುರುವಾಗುತ್ತದೆ. ಕೆಲವೊಮ್ಮೆ ಸೆನಿಟೈಜರ್ ಬಳಕೆಯಿಂದ ಕೂಡ ಕೈಗಳು ಸುಕ್ಕಾಗುತ್ತವೆ. ಇದರಿಂದ ದೂರವಿರಲು ಮಹಿಳೆಯರು ಪರ್ಸ್ ನಲ್ಲಿ ಹ್ಯಾಂಡ್ ಲೋಶನ್ ಗಳನ್ನು ಇಟ್ಟುಕೊಳ್ಳಿ. ಅವಶ್ಯವಿದ್ದಾಗ ಅದನ್ನು ನಿಮ್ಮ ಕೈಗಳಿಗೆ ಹಚ್ಚಿಕೊಳ್ಳಿ.
ಲಿಪ್ ಬಾಮ್ / ಲಿಪ್ಸ್ಟಿಕ್ : ಚಳಿಗಾಲದಲ್ಲಿ ತುಟಿ ಒಣಗಿ ಒಡೆಯುತ್ತದೆ. ಹಾಗಾಗಿ ಪರ್ಸ್ ನಲ್ಲಿ ಯಾವಾಗಲೂ ಲಿಪ್ ಬಾಮ್ ಇಟ್ಟುಕೊಳ್ಳಿ. ಆಗಾಗ, ಅವಶ್ಯಕವೆನಿಸಿದಾಗ ಇದನ್ನು ಹಚ್ಚಿಕೊಂಡು ತುಟಿಗೆ ರಕ್ಷಣೆ ನೀಡಬಹುದು.
ಟಿಶ್ಯೂ : ಪರ್ಸ್ ನಲ್ಲಿ ಟಿಶ್ಯೂ ಯಾವಾಗಲೂ ಇರಲಿ. ಇದು ಶೀತವಾದಾಗ ಮತ್ತು ಮುಖ ಮತ್ತು ಕೈಗಳನ್ನು ತೊಳೆದಾಗ ಉಪಯೋಗಕ್ಕೆ ಬರುತ್ತದೆ.
ಸನ್ ಸ್ಕ್ರೀನ್ : ಬಿಸಿಲಿಗೆ ಹೋದ ತಕ್ಷಣ ಚರ್ಮದ ಕಾಂತಿ ಹೊರಟುಹೋಗುತ್ತೆ. ಇದರಿಂದ ಬಚಾವಾಗಲು ಸನ್ ಸ್ಕ್ರೀನ್ ಬಳಸಬೇಕು. ಸನ್ ಸ್ಕ್ರೀನ್ ಚರ್ಮವನ್ನು ಸೂರ್ಯನ ಬಿಸಿಲಿನಿಂದ ರಕ್ಷಿಸುತ್ತದೆ. ಚರ್ಮಕ್ಕೆ ಆಳವಾದ ಪೋಷಣೆ ಒದಗಿಸುತ್ತದೆ. ಮನೆಯಿಂದ ಹೊರಗಡೆ ಹೋಗುವ 20-30 ನಿಮಿಷ ಮೊದಲೇ ಸನ್ ಸ್ಕ್ರೀನ್ ಹಚ್ಚಿಕೊಳ್ಳಿ. ಹೀಗೆ ಮಾಡುವುದರಿಂದ ನಿಮ್ಮ ತ್ವಚೆಗೆ ಯಾವುದೇ ಹಾನಿಯಾಗುವುದಿಲ್ಲ.
ಸಿಸಿ ಕ್ರೀಮ್ : ಸನ್ ಸ್ಕ್ರೀನ್ ತರಹ ಸಿಸಿ ಕ್ರೀಮ್ ಕೂಡ ಚರ್ಮವನ್ನು ಪ್ರೊಟೆಕ್ಟ್ ಮಾಡುತ್ತೆ. ಇದು ಚರ್ಮದ ಮೇಲೆ ಇನ್ನೊಂದು ಲೇಯರ್ ಉಂಟುಮಾಡಿ ಚರ್ಮದ ಗ್ಲೋ ಹೆಚ್ಚಿಸುತ್ತದೆ.
ವಾಟರ್ ಪ್ರೂಫ್ ಕಾಜಲ್ : ಕಣ್ಣಿಗೆ ಕಾಡಿಗೆ ಕಚ್ಚುವುದರಿಂದ ಮಹಿಳೆಯ ಅಂದ ಹೆಚ್ಚುತ್ತದೆ. ಆದರೆ ಕಾಡಿಗೆ ಸಾಮಾನ್ಯ ಕ್ವಾಲಿಟಿಯದ್ದಾದರೆ ಅದು ಕಣ್ಣಿನ ಸುತ್ತ ಹರಡುತ್ತದೆ. ಹಾಗಾಗಿ ಮಹಿಳೆಯರು ತಮ್ಮ ಬ್ಯಾಗ್ ನಲ್ಲಿ ವಾಟರ್ ಪ್ರೂಫ್ ಕಾಜಲ್ ಇಟ್ಟುಕೊಳ್ಳಬೇಕು. ಇದು ಕಣ್ಣಿನ ಅಂದ ಹೆಚ್ಚಿಸುತ್ತದೆ.