ಚಿಕ್ಕ ಮಗುವನ್ನು ಹೊರಗಡೆ ಕರೆದುಕೊಂಡು ಹೋಗುವಾಗ ಕೆಲವೊಮ್ಮೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ನೀವು ಮದುವೆ ಕಾರ್ಯಕ್ರಮ, ಇಲ್ಲವೇ ಯಾವುದಾದರೂ ಪಾರ್ಟಿಗೆ, ಊರಿಗೆ ಮಗುವಿನ ಜತೆ ಹೋಗುವಿರಾದರೆ ಇವಿಷ್ಟನ್ನು ತಪ್ಪದೇ ನಿಮ್ಮ ಬ್ಯಾಗ್ ನಲ್ಲಿಡಿ.
ಡೈಪರ್ಸ್: ಇದನ್ನು ಯಾವುದೇ ಕಾರಣಕ್ಕೂ ಮಿಸ್ ಮಾಡದೇ ನಿಮ್ಮ ಬ್ಯಾಗ್ ನಲ್ಲಿಡಿ. ಹೊರಗಡೆ ಹೋಗುವಾಗ ಎಕ್ಸ್ಟ್ರಾ ಡೈಪರ್ಸ್ ನಿಮ್ಮ ಬ್ಯಾಗ್ ನಲ್ಲಿದ್ದರೆ ಸಮಸ್ಯೆ ಆಗುವುದಿಲ್ಲ.
ಇನ್ನು ಮಗುವಿನ ವಾಟರ್ ಬಾಟಲ್ ಇಲ್ಲವೇ, ಹಾಲಿನ ಬಾಟಲ್ ಅನ್ನು ಮರೆಯದೇ ಬ್ಯಾಗ್ ನಲ್ಲಿಟ್ಟುಕೊಳ್ಳಿ.
ಮಗು ತಿನ್ನುವ ಬಿಸ್ಕೆಟ್, ಅಥವಾ ಸಿರಲೆಕ್ಸ್ ಗಳನ್ನು ತಪ್ಪದೇ ಚಿಕ್ಕ ಡಬ್ಬಿಯಲ್ಲಿ ತುಂಬಿಸಿಕೊಳ್ಳಿ. ಚಿಕ್ಕ ಮಕ್ಕಳು ಹಸಿವೆಯಾದಾಗ ತಕ್ಷಣ ಅಳುವುದಕ್ಕೆ ಶುರುಮಾಡುತ್ತದೆ. ಆಗ ನಿಮಗೆ ಕಿರಿಕಿರಿಯಾಗುತ್ತದೆ. ಹಾಗಾಗಿ ಬಿಸ್ಕೆಟ್ ಏನಾದರೂ ಇದ್ದರೆ ಸುಲಭದಲ್ಲಿ ಮಕ್ಕಳನ್ನು ನಿಭಾಯಿಸಬಹುದು.
ಮಗು ಇಷ್ಟಪಟ್ಟು ತಿನ್ನುವ ಹಣ್ಣು, ಡ್ರೈ ಫ್ರೂಟ್ಸ್, ಜೊತೆಗಿಟ್ಟುಕೊಳ್ಳುವುದನ್ನು ಮರೆಯಬೇಡಿ.
ಮಕ್ಕಳ ಮೆಡಿಸಿನ್ ಅನ್ನು ಕೂಡ ಬ್ಯಾಗ್ ನಲ್ಲಿಡುವುದನ್ನು ಮರೆಯಬೇಡಿ. ಕೆಲವು ಮಕ್ಕಳಿಗೆ ಕೆಲವೊಂದು ಔಷಧಿ ಮಾತ್ರ ಸರಿಯಾಗುತ್ತದೆ. ನಿಮಗೆ ಬೇಕಾದ ಔಷಧಿ ಸಿಗದೇ ಮೆಡಿಕಲ್ ಹುಡುಕುತ್ತ ಪರದಾಡುವುದಕ್ಕಿಂತ ಮಕ್ಕಳ ಶೀತ, ಕೆಮ್ಮು, ಜ್ವರದ ಔಷಧಿ ತೆಗೆದುಕೊಂಡು ಹೋಗುವುದೇ ವಾಸಿ.