ಈಗಂತೂ ಬೊಜ್ಜು, ಒಬೆಸಿಟಿ ಬಹುತೇಕರ ದೊಡ್ಡ ಸಮಸ್ಯೆಯಾಗಿಬಿಟ್ಟಿದೆ. ಏನನ್ನೇ ಇಷ್ಟ ಪಟ್ಟು ತಿನ್ನಬೇಕು ಅನಿಸಿದರೂ ಸ್ವಲ್ಪ ಯೋಚಿಸಿ ತಿನ್ನಬೇಕಾದ ಪರಿಸ್ಥಿತಿ ಎದುರಾಗಿದೆ. ಡಯಟ್, ವೇಟ್ ಲಾಸ್ ಅನ್ನೋರು ನಿತ್ಯ ಅಡುಗೆಯಲ್ಲಿ ಈ ಮಸಾಲೆ ಪದಾರ್ಥಗಳನ್ನು ಉಪಯೋಗಿಸಿ ಆರೋಗ್ಯ ವೃದ್ಧಿಸಿಕೊಳ್ಳಿ.
ಕರಿಮೆಣಸು
ಮೆಣಸಿನಲ್ಲಿ ಪಿಪ ರೈನ್ ಎಂಬ ಪದಾರ್ಥ ಇರುತ್ತದೆ. ಇದು ದೇಹದಲ್ಲಿನ ಫ್ಯಾಟ್ ಕಣಗಳನ್ನು ಬೆಳೆಯಲು ಬಿಡುವುದಿಲ್ಲ. ಆಗಾಗ ತಾಜಾ ಕರಿಮೆಣಸನ್ನು ಅಡುಗೆಯಲ್ಲಿ ಬಳಸಿದರೆ ಅಥವಾ ಸೂಪ್, ಸಾಂಬಾರ್ ಇತ್ಯಾದಿಗಳಲ್ಲಿ ಬಳಸಿ ಸೇವಿಸುವುದು ಉತ್ತಮ.
ದಾಲ್ಚಿನ್ನಿ ಚಕ್ಕೆ
ಮಸಾಲೆ ದಿನಸಿಗಳಲ್ಲಿ ಒಂದಾದ ದಾಲ್ಚಿನ್ನಿ ಚಕ್ಕೆ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿರಿಸುವ ಗುಣ ಹೊಂದಿದೆ. ಇದರಿಂದ ದೇಹದ ತೂಕ ಬೇಗ ಏರುವುದಿಲ್ಲ. ಹಾಗಂತ ತೀರಾ ಹೆಚ್ಚಾಗಿ ಬಳಸದೆ ಚಿಟಿಕೆ ಪುಡಿ ಅಡುಗೆಗೆ ಹಾಕಿದರೆ ರುಚಿಯಾಗಿರುತ್ತದೆ, ಆರೋಗ್ಯಕ್ಕೂ ಒಳ್ಳೆಯದು.
ಒಣಮೆಣಸಿನಕಾಯಿ
ಇದು ಸಾಂಬಾರು, ಗೊಜ್ಜಿಗೆ ಒಳ್ಳೆಯ ರುಚಿಯನ್ನು ಕೊಡುವುದಷ್ಟೇ ಅಲ್ಲ, ಆರೋಗ್ಯಕ್ಕೆ ಉಪಯುಕ್ತಕಾರಿ. ದೇಹದಲ್ಲಿ ಉಷ್ಣವನ್ನು ಹೆಚ್ಚಿಸಿ ಫ್ಯಾಟ್ ಅನ್ನು ಕರಗುವಂತೆ ಮಾಡುತ್ತದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ.