ಸೋಮವಾರ ಭಗವಂತ ಶಿವನ ಆರಾಧನೆ ಮಾಡಲಾಗುತ್ತದೆ. ಶಿವ ಸಣ್ಣ ಲೋಟದಲ್ಲಿ ನೀರು ಅರ್ಪಣೆ ಮಾಡಿದ್ರೂ ಪ್ರಸನ್ನನಾಗಿ ಬಿಡ್ತಾನೆ. ಹಾಗಾಗಿ ಆತನನ್ನು ಭೋಲೆನಾಥ್ ಎಂದು ಕರೆಯಲಾಗುತ್ತದೆ. ಹಾಲು, ಮೊಸಲು, ಬಿಲ್ವಪತ್ರೆಯನ್ನು ಶಿವನಿಗೆ ಅರ್ಪಿಸಲಾಗುತ್ತದೆ. ಭಗವಂತ ಶಿವ ಬಿಲ್ವಪತ್ರೆ ಪ್ರಿಯ.
ಶಿವಲಿಂಗಕ್ಕೆ ಬಿಲ್ವಪತ್ರೆ ಅರ್ಪಿಸಿದ್ರೆ ಶಿವ ಪ್ರಸನ್ನನಾಗ್ತಾನೆ. ಶಿವನ ಆರಾಧನೆ ಬಿಲ್ವಪತ್ರೆಯಿಲ್ಲದೆ ನೆರವೇರಲ್ಲ ಎಂಬ ನಂಬಿಕೆಯೂ ಇದೆ. ಶಿವನಿಗೆ ಬಿಲ್ವಪತ್ರೆ ಅರ್ಪಿಸುವ ವೇಳೆ ಹಾಗೂ ಗಿಡದಿಂದ ಬಿಲ್ವಪತ್ರೆ ಕೀಳುವ ವೇಳೆ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ.
ಚತುರ್ಥಿ, ಅಷ್ಠಮಿ, ನವಮಿ, ಚತುರ್ದಶಿ, ಅಮವಾಸ್ಯೆಯಂದು ಬಿಲ್ವಪತ್ರೆಯನ್ನು ಕೀಳಬಾರದು. ಸಂಕ್ರಾಂತಿ ಸಮಯದಲ್ಲಿ ಹಾಗೂ ಸೋಮವಾರ ಯಾವುದೇ ಕಾರಣಕ್ಕೂ ಬಿಲ್ವಪತ್ರೆ ಕೀಳಬಾರದು. ಒಂದು ವೇಳೆ ಹೊಸ ಬಿಲ್ವಪತ್ರೆ ಸಿಕ್ಕಿಲ್ಲವಾದಲ್ಲಿ ಹಳೆ ಪತ್ರೆಯನ್ನು ತೊಳೆದು ಬಳಸಬಹುದಾಗಿದೆ.
ಶಿವಲಿಂಗದ ಮೇಲೆ ಬಿಲ್ವಪತ್ರೆ ಅರ್ಪಿಸುವ ವೇಳೆಯೂ ಕೆಲವೊಂದು ವಿಷಯಗಳ ಬಗ್ಗೆ ಗಮನ ನೀಡಬೇಕಾಗುತ್ತದೆ. 3ರಿಂದ 11 ಎಲೆಗಳಿರುತ್ತವೆ. ಹೆಚ್ಚು ಎಲೆಗಳಿರುವುದನ್ನು ಅರ್ಪಿಸಿದಷ್ಟು ಫಲ ಜಾಸ್ತಿ. ಪತ್ರೆ ಹರಿದಿರಬಾರದು. ಹಾಗೆ ಯಾವುದೇ ತೂತುಗಳಾಗಿರಬಾರದು. ಬಿಲ್ವಪತ್ರೆ ಅರ್ಪಣೆ ಮಾಡುವ ಜೊತೆಗೆ ಜಲವನ್ನು ಅರ್ಪಣೆ ಮಾಡಬೇಕು. ಬರಿ ಬಿಲ್ವಪತ್ರೆಯನ್ನು ಎಂದೂ ಅರ್ಪಿಸಬಾರದು.