
ಸ್ವಂತ ಮನೆ ಪ್ರತಿಯೊಬ್ಬರ ಕನಸು. ಮನೆಯ ನಿರ್ಮಾಣದ ವೇಳೆ ಎಂಜಿನಿಯರ್ ನಿಂದ ಹಿಡಿದು ಮನೆಯ ಒಳಾಂಗಣ ಸೌಂದರ್ಯದವರೆಗೆ ಎಲ್ಲ ಸಣ್ಣ ಪುಟ್ಟ ವಿಷಯಗಳ ಬಗ್ಗೆ ಗಮನ ಹರಿಸ್ತಾರೆ. ಆದ್ರೆ, ಮನೆಯ ವಾಸ್ತು ಬಗ್ಗೆ ಮಾತ್ರ ಅನೇಕರು ಹೆಚ್ಚಾಗಿ ಗಮನ ನೀಡುವುದಿಲ್ಲ. ವಾಸ್ತು ಶಾಸ್ತ್ರದ ಪ್ರಕಾರ ಮನೆಯ ವಾಸ್ತು ಸರಿಯಿರದೆ ಹೋದಲ್ಲಿ ಆರ್ಥಿಕ ಸಮಸ್ಯೆಯ ಜೊತೆಗೆ ಆರೋಗ್ಯ ಸಮಸ್ಯೆಗಳು ಶುರುವಾಗುತ್ತವೆಯಂತೆ.
ಹೊಸ ಮನೆಗೆ ಪ್ರವೇಶ ಮಾಡಿದ ನೀವೂ ಕೂಡ ಆರ್ಥಿಕ ಸಮಸ್ಯೆ ಅಥವಾ ಆರೋಗ್ಯ ಸಮಸ್ಯೆಯಿಂದ ಬಳಲ್ತಾ ಇದ್ದರೆ ಇದಕ್ಕೆ ವಾಸ್ತುದೋಷ ಕಾರಣವೇ ಎಂಬುದನ್ನು ಮೊದಲು ತಿಳಿದುಕೊಳ್ಳಿ. ಮನೆ ಕಟ್ಟುವ ಮೊದಲೇ ವಾಸ್ತು ಪ್ರಕಾರ ಮನೆ ನಿರ್ಮಾಣಕ್ಕೆ ಆಧ್ಯತೆ ನೀಡಿ.
ಹೊಸ ಮನೆ ನಿರ್ಮಾಣಕ್ಕೆ ಹಳೆ ಮನೆಯ ವಸ್ತುಗಳನ್ನು ಬಳಸಬೇಡಿ. ಅನೇಕರು ಹಣ ಉಳಿಸುವ ಉದ್ದೇಶದಿಂದ ಹಳೆ ಮನೆಯ ವಸ್ತುಗಳನ್ನು ಬಳಸ್ತಾರೆ. ಇದು ನಕಾರಾತ್ಮಕ ಶಕ್ತಿ ಮನೆ ಪ್ರವೇಶಕ್ಕೆ ಕಾರಣವಾಗುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ ಹೆಡ್ ಪಂಪ್ ಅಥವಾ ಅಂಡರ್ ಗ್ರೌಂಡ್ ನೀರಿನ ಟ್ಯಾಂಕನ್ನು ವಾಸ್ತು ಪ್ರಕಾರವೇ ನಿರ್ಮಾಣ ಮಾಡಬೇಕು. ಉತ್ತರ-ಪೂರ್ವ ದಿಕ್ಕಿನಲ್ಲಿ ಇದು ಇದ್ದರೆ ಒಳ್ಳೆಯದು. ಇಷ್ಟೇ ಅಲ್ಲ ಒಳಾಂಗಣದಲ್ಲಿಯೂ ವಾಸ್ತುವಿಗೆ ಗಮನ ನೀಡಬೇಕಾಗುತ್ತದೆ. ಬೆಡ್ ರೂಂ, ಡ್ರಾಯಿಂಗ್ ರೂಂ, ಕಿಚನ್ ಎಲ್ಲ ರೂಮುಗಳನ್ನು ವಾಸ್ತು ಪ್ರಕಾರ ಕಟ್ಟಿಸಿಕೊಳ್ಳಬೇಕು. ವಾಸ್ತು ತಜ್ಞರ ಸಲಹೆ ಪಡೆದು ಮನೆ ನಿರ್ಮಾಣ ಮಾಡಿದಲ್ಲಿ ಪಟ್ಟ ಶ್ರಮಕ್ಕೆ ಫಲ ಸಿಗುತ್ತದೆ. ಮನೆ ಕಟ್ಟಿದ ನೆಮ್ಮದಿ ಸಿಗುತ್ತದೆ. ಇಲ್ಲವಾದ್ರೆ ಹೊಸ ಮನೆ ಪ್ರವೇಶ ಮಾಡಿಯೂ ಕಿರಿಕಿರಿ, ಹಣದ ಸಮಸ್ಯೆಯಿಂದ ಮುಕ್ತಿ ಹೊಂದಲು ಸಾಧ್ಯವಾಗುವುದಿಲ್ಲ.