ಮನೆಯಲ್ಲೊಂದು ಮಗು ಇದ್ದರೆ ಸಂತೋಷಕ್ಕೆ ಮಿತಿಯೇ ಇರುವುದಿಲ್ಲ. ಮನೆಗೆ ಯಾರೇ ಬಂದರೂ ಪುಟ್ಟ ಮಗುವಿಗೆ ಬಟ್ಟೆ, ತಿನಿಸು, ಆಟಿಕೆಗಳನ್ನು ತರುವುದು ಸಾಮಾನ್ಯ. ಮನೆಯಲ್ಲಿ ಇರುವವರು ತಮಗೆ ಕಂಡ ಚೆಂದದ ಆಟಿಕೆಗಳನ್ನೆಲ್ಲಾ ಮುದ್ದು ಕಂದಮ್ಮಗಳಿಗೆ ತಂದು ಕೊಡುತ್ತಾರೆ.
ಹಸುಗೂಸಿಗೆ ಆಟಿಕೆ ತರುವಾಗ ಕೆಲವೊಂದು ವಿಷಯಗಳನ್ನ ನೆನಪಿನಲ್ಲಿ ಇಟ್ಟುಕೊಳ್ಳಲೆ ಬೇಕು. ಹಸುಗೂಸುಗಳ ಕೈಗೆ ಏನೆ ಕೊಟ್ಟರೂ ಬಾಯಿಗೆ ಇಟ್ಟುಕೊಳ್ಳುವುದರಿಂದ ಚೂಪಾದ ಆಟಿಕೆಗಳು ಆದಷ್ಟು ಕೊಡದೇ ಇರುವುದೇ ಸೂಕ್ತ.
ಆಟಿಕೆಗಳು ಉತ್ತಮ ಗುಣಮಟ್ಟದ್ದಾಗಿರಬೇಕು. ಬಣ್ಣ ಬಿಡುವ ಹಾಗಿರಬಾರದು. ಬಣ್ಣ ಬಿಡುವ ಆಟಿಕೆಗಳು ಮಗುವಿನ ಬಾಯಿಗೆ ಹೋದರೆ ಹಾನಿಕರ. ಜೊತೆಗೆ ಪುಟ್ಟ ಮಕ್ಕಳು ಗಾಢ ಬಣ್ಣಗಳಿಗೆ ಬೇಗ ಆಕರ್ಷಣೆಗೆ ಒಳಪಡುತ್ತಾರೆ. ಕೆಂಪು, ಹಸಿರು, ನೀಲಿ ಬಣ್ಣಗಳ ಆಟಿಕೆಗಳು ಮಕ್ಕಳಿಗೆ ಖಂಡಿತಾ ಇಷ್ಟವಾಗುತ್ತದೆ.