ಜೀವನದ ಸುಖ-ಶಾಂತಿಗಾಗಿ ವಾಸ್ತು ಶಾಸ್ತ್ರದ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ. ವಾಸ್ತುಶಾಸ್ತ್ರದ ಪ್ರಕಾರ ನಡೆದುಕೊಂಡ್ರೆ ಆರ್ಥಿಕ ಸ್ಥಿತಿ ವೃದ್ಧಿಯಾಗುವ ಜೊತೆಗೆ ನಕಾರಾತ್ಮಕ ಶಕ್ತಿಯ ನಷ್ಟವಾಗುತ್ತದೆ.
ವಾಸ್ತು ಶಾಸ್ತ್ರದಲ್ಲಿ ಪಿರಾಮಿಡ್ ಗೆ ಬಹಳ ಮಹತ್ವ ನೀಡಲಾಗಿದೆ. ಮನೆಯ ಯಾವ ಜಾಗದಲ್ಲಿ ವಾಸ್ತು ದೋಷವಿದೆಯೋ ಆ ಜಾಗದಲ್ಲಿ ಪಿರಾಮಿಡ್ ಇಟ್ಟರೆ ವಾಸ್ತು ದೋಷ ನಿವಾರಣೆಯಾಗುತ್ತದೆ. ಆರ್ಥಿಕ ಸಮಸ್ಯೆ ಹೋಗಲಾಡಿಸಲು ಹಿತ್ತಾಳೆ, ತಾಮ್ರ, ಬೆಳ್ಳಿಯ ಪಿರಾಮಿಡ್ ಮನೆಯಲ್ಲಿಡಿ.
ಧನ-ಸಂಪತ್ತು, ಸುಖ-ಶಾಂತಿಗಾಗಿ ಪಂಚಮುಖಿ ಹನುಮಂತನ ಮೂರ್ತಿಯನ್ನು ಮನೆಯ ನೈಋತ್ಯ ಭಾಗದಲ್ಲಿಟ್ಟು ಪೂಜೆ ಮಾಡಿ.
ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಆಮೆಯನ್ನಿಡಿ. ಲೋಹದ ಆಮೆಯನ್ನಿಡುವುದರಿಂದ ಮನೆಯಲ್ಲಿ ಕಾಡುವ ಆರ್ಥಿಕ ಸಮಸ್ಯೆ ನಿಧಾನವಾಗಿ ಕಡಿಮೆಯಾಗುತ್ತದೆ.
ಮನೆಯ ಎಲ್ಲ ವಾಸ್ತು ದೋಷ ನಿವಾರಣೆಗೆ ವಾಸ್ತು ದೇವತೆಗಳ ಮೂರ್ತಿ ಅಥವಾ ಫೋಟೋವನ್ನು ಮನೆಯಲ್ಲಿಡುವುದರಿಂದ ಹಣದ ಕೊರತೆ ನಿವಾರಣೆಯಾಗುತ್ತದೆ.