ದೇವರ ಆರಾಧನೆಗೆ ಅನೇಕ ಬಣ್ಣದ ಹೂಗಳನ್ನು ಬಳಸಲಾಗುತ್ತದೆ. ಆದ್ರೆ ದೇವರ ಪೂಜೆಗೆ ಕೆಂಪು ಹಾಗೂ ಹಳದಿ ಬಣ್ಣದ ಹೂ ಶ್ರೇಷ್ಠವೆಂದು ನಂಬಲಾಗಿದೆ. ಕೆಂಪು ಬಣ್ಣದ ಹೂವಿನಲ್ಲಿ ದೇವರ ಆರಾಧನೆ ಮಾಡಿದ್ರೆ ದೇವರು ಬೇಗ ಕೃಪೆ ತೋರುತ್ತಾನೆ ಎಂಬ ನಂಬಿಕೆಯಿದೆ. ವಾಸ್ತು ಶಾಸ್ತ್ರ ಹಾಗೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಂಪು ಹೂ ದೇವರನ್ನು ಸಂತೋಷ ಪಡಿಸುವ ಜೊತೆಗೆ ಎಲ್ಲ ಆಸೆಗಳನ್ನು ಈಡೇರಿಸಲು ನೆರವಾಗುತ್ತದೆಯಂತೆ.
ನಿಮ್ಮ ಆಸೆ ಬಹು ಬೇಗ ಈಡೇರಬೇಕು ಎಂದ್ರೆ ನಿಮ್ಮ ಕೈಚೀಲದಲ್ಲಿ ಕೆಂಪು ಅಥವಾ ಹಳದಿ ಬಣ್ಣದ ಕರ್ಚೀಪ್ ಇಡಿ. ಇಲ್ಲ ಕೆಂಪು ಅಥವಾ ಹಳದಿ ಬಣ್ಣದ ಹೂ ಇಟ್ಟುಕೊಳ್ಳಿ. ನೆನಪಿರಲಿ ಪ್ರತಿ ದಿನ ಪರ್ಸ್ ನಲ್ಲಿರುವ ಹೂವನ್ನು ಬದಲಿಸುತ್ತಿರಿ. ಪ್ರತಿ ದಿನ ಹೀಗೆ ಮಾಡ್ತಿದ್ದರೆ ಕೆಲವೇ ದಿನಗಳಲ್ಲಿ ಇದ್ರ ಪರಿಣಾಮ ಕಾಣಬಹುದಾಗಿದೆ.
ಉದ್ಯೋಗದಲ್ಲಿ ಶತ್ರುಗಳ ಕಾಟ ಹೆಚ್ಚಾಗಿದ್ರೆ. ಸ್ನೇಹಿತರೇ ಶತ್ರುಗಳಾಗ್ತಿದ್ದರೆ ಕಚೇರಿಯ ದಕ್ಷಿಣ ದಿಕ್ಕಿನಲ್ಲಿ ನೀರಿನ ಟ್ಯಾಂಕ್ ಇದ್ದರೆ ಅದನ್ನು ಬದಲಿಸಿ. ಕಚೇರಿಯ ಮೇಲ್ಭಾಗಕ್ಕೆ ಕೆಂಪು ಬಣ್ಣದ ಧ್ವಜವನ್ನು ಹಾಕಿ. ಇದು ಶತ್ರುಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ.
ಇನ್ನು ಕೆಂಪು ಬಣ್ಣದ ಮೇಣದ ಬತ್ತಿಯನ್ನು ದಕ್ಷಿಣ ದಿಕ್ಕಿನಲ್ಲಿಟ್ಟು ಹಚ್ಚಿದ್ರೆ ತಾಯಿ ಲಕ್ಷ್ಮಿ ಪ್ರಸನ್ನಳಾಗ್ತಾಳೆ. ನಿಮ್ಮೆಲ್ಲ ಬಯಕೆ ಈಡೇರುತ್ತದೆ.