ಸಾಮಾನ್ಯವಾಗಿ ಎಲ್ಲರೂ ಪಾರ್ಲರ್‌ಗಳಲ್ಲಿ ವ್ಯಾಕ್ಸಿಂಗ್ ಮಾಡಿಸಿಕೊಳ್ಳುತ್ತಾರೆ. ಆದರೆ ಅನೇಕ ಕಾರಣಗಳಿಂದ ಪಾರ್ಲರ್‌ಗೆ ಹೋಗಲು ಸಮಯ ಸಿಗದೇ ಇದ್ದಾಗ ಮನೆಯಲ್ಲೇ ಪ್ರಯತ್ನಿಸುವವರೂ ಇದ್ದಾರೆ. ಮನೆಯಲ್ಲೇ ವ್ಯಾಕ್ಸಿಂಗ್ ಮಾಡಿಕೊಳ್ಳುವುದರಿಂದ ಹಣ ಕೂಡ ಉಳಿತಾಯ ಮಾಡಬಹುದು. ಆದರೆ ಮನೆಯಲ್ಲಿ ವ್ಯಾಕ್ಸಿಂಗ್ ಮಾಡಿಕೊಳ್ಳುವ ಸಂದರ್ಭದಲ್ಲಿ ಕೆಲವು ಎಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು.
ಟೆಂಪ್ರೇಚರ್
ವ್ಯಾಕ್ಸಿಂಗ್ ಮಾಡಿಕೊಳ್ಳುವಾಗ ಎಚ್ಚರ ವಹಿಸದೇ ಇದ್ದರೆ ಚರ್ಮಕ್ಕೆ ಹಾನಿಯಾಗಬಹುದು. ಅನಗತ್ಯ ಕೂದಲನ್ನು ತೆಗೆದುಹಾಕಲು ಜನರು ಶೇವಿಂಗ್, ಕೂದಲು ತೆಗೆಯುವ ಕ್ರೀಮ್ ಮತ್ತು ಇತರ ಅನೇಕ ವಸ್ತುಗಳನ್ನು ಬಳಸುತ್ತಾರೆ. ಮನೆಯಲ್ಲಿ ವ್ಯಾಕ್ಸಿಂಗ್ ಮಾಡುವಾಗ ವ್ಯಾಕ್ಸ್ ತಾಪಮಾನವು ಸರಿಯಾಗಿರಬೇಕು. ಇಲ್ಲದಿದ್ದರೆ ಚರ್ಮ ಸುಟ್ಟುಹೋಗಬಹುದು.
ತೆಳುವಾದ ಪದರ
ವ್ಯಾಕ್ಸಿಂಗ್ ಸಮಯದಲ್ಲಿ ಕೆಲವರು ತೆಳುವಾಗಿ ಅದನ್ನು ಅನ್ವಯಿಸುತ್ತಾರೆ, ಈ ರೀತಿ ಮಾಡುವುದರಿಂದ ಕೂದಲನ್ನು ಸಂಪೂರ್ಣವಾಗಿ ತೆಗೆದು ಹಾಕಲು ಸಾಧ್ಯವಾಗುವುದಿಲ್ಲ. ಹಾಗಾಗಿ ಬಿಸಿಯಾದ ವ್ಯಾಕ್ಸ್ ಅನ್ನು ದಪ್ಪಗೆ ಹಚ್ಚಿಕೊಳ್ಳಬೇಕು.
ಸ್ಟ್ರಿಪ್
ವ್ಯಾಕ್ಸಿಂಗ್ ಮಾಡುವಾಗ ಆಗುವ ನೋವಿನಿಂದ ಎಲ್ಲರೂ ಭಯಪಟ್ಟುಕೊಳ್ಳುತ್ತಾರೆ. ವ್ಯಾಕ್ಸಿಂಗ್ ನೋವನ್ನು ತಪ್ಪಿಸಲು ಸ್ಟ್ರಿಪ್ ಅನ್ನು ತುಂಬಾ ಮೃದುವಾಗಿ ಎಳೆಯಬೇಡಿ. ಹೀಗೆ ಮಾಡುವುದರಿಂದ ಚರ್ಮಕ್ಕೆ ಹಾನಿಯಾಗಬಹುದು, ಕೂದಲನ್ನು ಕೂಡ ಸಂಪೂರ್ಣ ತೆಗೆದುಹಾಕಲು ಸಾಧ್ಯವಾಗುವುದಿಲ್ಲ.
ಗಾಯ
ವ್ಯಾಕ್ಸಿಂಗ್ ಸಮಯದಲ್ಲಿ ಅನೇಕ ತಪ್ಪುಗಳು ಸಂಭವಿಸುತ್ತವೆ, ಇದು ಚರ್ಮವನ್ನು ಸಂಪೂರ್ಣವಾಗಿ ಹಾಳು ಮಾಡುತ್ತದೆ. ಗಾಯಗಳ ಮೇಲೆ ವ್ಯಾಕ್ಸ್ ಅನ್ನು ಅನ್ವಯಿಸಬಾರದು. ಆ ಜಾಗದಲ್ಲಿ ವ್ಯಾಕ್ಸಿಂಗ್ ಮಾಡಬಾರದು. ಸ್ಟ್ರಿಪ್ ಅನ್ನು ಎಳೆಯುವಾಗ ಗಾಯಗಳು ಅಥವಾ ಕಡಿತಗಳಿದ್ದರೆ ಅದನ್ನು ಅವಾಯ್ಡ್ ಮಾಡಿ.
ಮಾಯಿಶ್ಚರೈಸರ್
ದೇಹದಿಂದ ಅನಗತ್ಯ ಕೂದಲನ್ನು ತೆಗೆದುಹಾಕುವುದು ಸುಲಭ. ಆದರೆ ವ್ಯಾಕ್ಸಿಂಗ್ ಮಾಡಿದ ನಂತರ ನೀರಿನಿಂದ ತೊಳೆಯಿರಿ ಮತ್ತು ಅದರ ಮೇಲೆ ಮಾಯಿಶ್ಚರೈಸರ್ ಅನ್ನು ಅನ್ವಯಿಸಿ.