alex Certify ಆನ್ಲೈನ್ ಪಾವತಿ ವೇಳೆ ನಿಮಗೆ ತಿಳಿದಿರಲಿ ʼಕ್ಯೂಆರ್‌ ಕೋಡ್ʼ ಕುರಿತ ಈ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆನ್ಲೈನ್ ಪಾವತಿ ವೇಳೆ ನಿಮಗೆ ತಿಳಿದಿರಲಿ ʼಕ್ಯೂಆರ್‌ ಕೋಡ್ʼ ಕುರಿತ ಈ ಮಾಹಿತಿ

ನಾವೆಲ್ಲಾ ಕ್ಯೂಆರ್‌ (ತ್ವರಿತ ಪ್ರತಿಕ್ರಿಯೆ) ಕೋಡ್‌ಗಳನ್ನು ಪಾವತಿ ಮಾಡುವ ವೇಳೆ ಬಳಸುವುದು ಸಹಜ. ಕೋವಿಡ್-19 ಸಾಂಕ್ರಮಿಕದ ಕಾರಣ ಈ ಖಯಾಲಿ ಇನ್ನಷ್ಟು ಹೆಚ್ಚಾಗಿದೆ. ಪೇಮೆಂಟ್ ಮಾಡುವ ವೇಳೆ, ಅಪ್ಲಿಕೇಶನ್ ಡೌನ್ಲೋಡ್ ಮಾಡುವ ಸಂದರ್ಭದಲ್ಲಿ ನಮ್ಮ ಸ್ಮಾರ್ಟ್‌‌ಫೋನ್ ಕ್ಯಾಮೆರಾ ಬಳಸಿಕೊಂಡು ಸ್ಕ್ಯಾನ್ ಮಾಡುವ ಬಾರ್‌ ಕೋಡ್‌ ಈ ಕ್ಯೂಆರ್‌ ಕೋಡ್.

ಇದೀಗ ಟಿಕೆಟ್ ಖರೀದಿಯಿಂದ ಹಿಡಿದು, ಫೋನ್ ಸಂಖ್ಯೆಗಳು, ಇಮೇಲ್ ವಿಳಾಸಗಳು ಹಾಗೂ ಹಣ ವರ್ಗಾವಣೆವರೆಗೂ ಕ್ಯೂಆರ್‌ ಕೋಡ್‌ಗಳ ಬಳಕೆ ಸರ್ವೇ ಸಾಮಾನ್ಯವಾಗಿರುವ ಕಾರಣ ವಂಚಕರು ಜನರಿಗೆ ಮೋಸ ಮಾಡಲು ಹೊಸ ಟೆಕ್ನಿಕ್ ಕಂಡುಕೊಂಡಿದ್ದಾರೆ. ಈ ಸಂಬಂಧ ಅಮೆರಿಕದ ಫೆಡರಲ್ ಬ್ಯೂರೋ ಒಂದಷ್ಟು ಎಚ್ಚರಿಕೆಯ ಮಾರ್ಗಸೂಚಿಗಳನ್ನು ಕೊಟ್ಟಿದೆ.

ದೇಶಾದ್ಯಂತ ಗಣರಾಜ್ಯೋತ್ಸವ ಸಂಭ್ರಮ: ಈ ಬಾರಿ ವಿಶೇಷತೆ ಏನು ಗೊತ್ತಾ…?

ಕ್ಯೂಆರ್‌ ಕೋಡ್ ಸ್ಕ್ಯಾನ್ ಮಾಡುವಾಗ ಏನು ಮಾಡಬೇಕು?

ನೀವು ಯಾವುದೇ ಕ್ಯೂಆರ್‌ ಕೊಡ್ ಸ್ಕ್ಯಾನ್ ಮಾಡಿದ ಮೇಲೆ, ನೀವು ಅದನ್ನು ರೀಡೈರೆಕ್ಟ್ ಮಾಡುತ್ತಿರುವ ಯುಆರ್‌ಎಲ್ ಕೋಡ್‌ಅನ್ನು ಪರೀಕ್ಷಿಸಬೇಕು. ನಕಲಿ ಅಥವಾ ದುರುದ್ದೇಶಪೂರಿತ ಯುಆರ್‌ಎಲ್‌ಗಳಲ್ಲಿ ಟೈಪೋ ಅಥವಾ ಅಕ್ಷರ ದೋಷಗಳನ್ನು ಕಾಣಬಹುದು. ಬಾಹ್ಯ ಉಪಕರಣಗಳ ಬಳಕೆಯಿಂದ ತುಂಡರಿಸಲಾದ ಯುಆರ್‌ಎಲ್‌ನ ಬಳಕೆಯನ್ನು ನೀವು ತಪ್ಪಿಸಬಹುದು. ಹೀಗೆ ಮಾಡಿದ ಯುಆರ್‌ಎಲ್‌ ನಿಮಗೆ ಜಾಲತಾಣದ ಹೆಸರನ್ನು ತೋರುವುದಿಲ್ಲ.

ಕ್ಯೂಆರ್‌ ಕೋಡ್ ಸ್ಕ್ಯಾನ್ ಮಾಡುವಾಗ ಏನು ಮಾಡಬಾರದು?

ನೀವು ಕ್ಯೂಆರ್‌ ಕೋಡ್‌ಗಳನ್ನು ಬಳಸಿಕೊಂಡು ಅಪ್ಲಿಕೇಶನ್‌ಗಳ ಡೌನ್ಲೋಡಿಂಗ್ ಮಾಡದೇ ಇರುವುದು ಉತ್ತಮ. ಏಕೆಂದರೆ ಇಂಥ ಕ್ಯೂಆರ್‌ ಕೋಡ್‌ಗಳು ದುರುದ್ದೇಶಪೂರಿತವಾಗಿದ್ದು, ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿರುವ ಸಂಪರ್ಕಗಳನ್ನು ಕದಿಯಬಹುದು. ಹಾಗಾಗಿ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಅಪ್ಲಿಕೇಶನ್‌ಗಳನ್ನು ಡೌನ್ಲೋಡ್ ಮಾಡಲು ಪ್ಲೇಸ್ಟೋರ್‌ ಅಥವಾ ಆಪ್ ಸ್ಟೋರ್‌ಗಳಂತ ಅಧಿಕೃತ ಗವಾಕ್ಷಿಗಳನ್ನೇ ನಂಬಿಕೊಳ್ಳುವುದು ಉತ್ತಮ.

ಕೋಡ್‌ನ ರಚನೆ ಬಗ್ಗೆ ಗಮನವಿರಲಿ

ನೀವು ಕ್ಯೂಆರ್‌ ಕೋಡ್‌ಅನ್ನು ದೈಹಿಕವಾಗಿ ಸ್ಕ್ಯಾನ್ ಮಾಡುವ ಮುನ್ನ ಬಹಳ ಹುಶಾರಾಗಿ ಇರಬೇಕು. ಅಸಲಿ ಕೋಡ್‌ನ ರಚನೆಯಲ್ಲಿ ಸ್ಟಿಕ್ಕರ್‌ ಅಂಟಿಸಿ ಏನಾದರೂ ವ್ಯತ್ಯಾಸಗಳು ಕಂಡು ಬಂದಿಲ್ಲ ಎಂದು ಖಾತ್ರಿ ಪಡಿಸಿಕೊಳ್ಳಿ. ಅನುಮಾನ ಬಂದಲ್ಲಿ ಸಂಬಂಧಪಟ್ಟ ವ್ಯಕ್ತಿಯಿಂದ ಈ ಬಗ್ಗೆ ಮರು ಖಾತ್ರಿ ಮಾಡಿಕೊಳ್ಳಿ.

ಜಾಲತಾಣಗಳ ಮೂಲಕ ಪಾವತಿ ಮಾಡಬೇಡಿ

ಕ್ಯೂಆರ್‌ ಕೋಡ್‌ಗಳ ಮೂಲಕ ತೆರೆಯಲ್ಪಡುವ ಜಾಲತಾಣಗಳಲ್ಲಿ ಪಾವತಿ ಮಾಡಬೇಡಿ. ನಿಮಗೆ ಕ್ಯೂಆರ್‌ ಕೋಡ್ ಮೂಲಕ ಪಾವತಿ ಮಾಡಬೇಕಾದಲ್ಲಿ, ಅದು ಸ್ವೀಕೃತರ ಗುರುತನ್ನು ಖಾತ್ರಿ ಮಾಡಬಲ್ಲಂಥ ಸಿಂಧುವಾದ ಪೇಮೆಂಟ್ ಅಪ್ಲಿಕೇಶನ್ ಮೂಲಕವೇ ಇರಲಿ. ಜಾಲತಾಣದ ಮೂಲಕ ಪೇಮೆಂಟ್ ಮಾಡಬೇಕದಲ್ಲಿ ಖುದ್ದು ನೀವೇ ಯುಆರ್‌ಎಲ್ ಟೈಪ್ ಮಾಡಿ.

ಇದನ್ನು ಮಾಡಬೇಡಿ:

ನೀವು ದುಡ್ಡು ಗೆದ್ದಿದ್ದೀರಿ ಎಂಬ ಪ್ರಲೋಭನೆ ತೋರುವ ಯಾವುದೇ ಸಂದೇಶ ಅಥವಾ ಇಮೇಲ್ ಮೂಲಕ ಕಳುಹಿಸಲಾದ ಕ್ಯೂಆರ್‌ ಕೋಡ್‌ಗಳನ್ನು ಸ್ಕ್ಯಾನ್ ಮಾಡಬೇಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...