ನಮ್ಮ ಮಗು ಒಂದು ಹೆಜ್ಜೆ ಮುಂದಿರಲಿ ಎಂಬುದು ಎಲ್ಲ ಪಾಲಕರ ಆಸೆ. ವಿದ್ಯಾಭ್ಯಾಸದಲ್ಲಿ ಮಕ್ಕಳು ಚುರುಕಾಗಿರಲೆಂದು ತಂದೆ- ತಾಯಿ ಬಯಸ್ತಾರೆ. ಅದಕ್ಕಾಗಿ ಸುಲಭ ಉಪಾಯ ಹುಡುಕ್ತಾರೆ. ಮಕ್ಕಳು ಯಾವುದರಲ್ಲೂ ಹಿಂದೆ ಬೀಳಬಾರ್ದು, ಎಲ್ಲ ಕ್ಷೇತ್ರದಲ್ಲಿಯೂ ಮುಂದಿರಬೇಕೆಂದು ಇಚ್ಛೆಸುವ ಪಾಲಕರು ಮುಖ್ಯವಾಗಿ ಮಕ್ಕಳ ಆಹಾರದ ಬಗ್ಗೆ ಗಮನ ನೀಡಬೇಕಾಗುತ್ತದೆ.
ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗಾಗಿ ಮಕ್ಕಳ ಆಹಾರದಲ್ಲಿ ಕೆಲವೊಂದು ಬದಲಾವಣೆ ತರುವ ಅಗತ್ಯವಿರುತ್ತದೆ. ಈ ಐದು ಜ್ಯೂಸ್ ಗಳು ಮಕ್ಕಳನ್ನು ಮಾನಸಿಕ ಹಾಗೂ ದೈಹಿಕವಾಗಿ ಚುರುಕು ಮಾಡುತ್ತವೆ.
ದಾಳಿಂಬೆ ಹಣ್ಣಿನ ಜ್ಯೂಸ್ : ದಾಳಿಂಬೆಯಲ್ಲಿ ಆ್ಯಂಟಿ ಆಕ್ಸಿಡೆಂಟ್ ಪ್ರಮಾಣ ಹೆಚ್ಚಿರುತ್ತದೆ. ಇದು ಮೆದುಳನ್ನು ನಿಷ್ಕ್ರಿಯಗೊಳಿಸುವ ಜೀವಕೋಶವನ್ನು ನಾಶಗೊಳಿಸುತ್ತದೆ. ಗ್ರೀನ್ ಟೀ ಹಾಗೂ ರೆಡ್ ವೈನ್ ಗಿಂತ ಹೆಚ್ಚಿನ ಪ್ರಮಾಣದಲ್ಲಿ ಆ್ಯಂಟಿ ಆಕ್ಸಿಡೆಂಟ್ ಇದರಲ್ಲಿರುತ್ತದೆ.
ಅಲೋವೆರಾ ಜ್ಯೂಸ್ : ಅಲೋವೆರಾದಲ್ಲಿ ಜೀವಸತ್ವ ಬಿ6 ಇದ್ದು,ಇದು ಮಕ್ಕಳ ನೆನಪಿನ ಶಕ್ತಿಯನ್ನು ಹೆಚ್ಚು ಮಾಡುತ್ತದೆ. ಸ್ವಲ್ಪ ಕಹಿಯಾಗಿರುವ ಈ ಜ್ಯೂಸ್ ಮಕ್ಕಳ ಮೆದುಳಿಗೆ ಉತ್ತಮ ಔಷಧಿ. ಪೇರಲೆ ಹಣ್ಣಿನ ರಸ ಅಥವಾ ಲಿಚ್ಛಿ ರಸದ ಜೊತೆ ಸೇರಿಸಿ ಕೊಟ್ಟರೆ ಮಕ್ಕಳು ಸುಲಭವಾಗಿ ಕುಡಿಯುತ್ತಾರೆ.
ಎಳೆನೀರು :ನಮ್ಮ ಮೆದುಳಿಗೂ ಕೊಬ್ಬಿನ ಅವಶ್ಯಕತೆ ಇರುತ್ತದೆ. ಎಳನೀರಿನಲ್ಲಿ ಕೊಬ್ಬಿನಂಶವಿರುತ್ತದೆ. ಇದು ಮೆದುಳನ್ನು ಚುರುಕುಗೊಳಿಸುತ್ತದೆ.
ಬೀಟ್ರೋಟ್ ಜ್ಯೂಸ್ : ಇದು ರಕ್ತಸಂಚಾರವನ್ನು ಸುಲಭಗೊಳಿಸುತ್ತದೆ. ಬೀಟ್ರೋಟ್ ಜ್ಯೂಸ್ ಮೆದುಳನ್ನು ಚುರುಕುಗೊಳಿಸುವ ಜೊತೆಗೆ ಬುದ್ಧಿಮಾಂದ್ಯರಾಗದಂತೆ ತಡೆಯುತ್ತದೆ.
ಟೋಮೋಟೋ ಜ್ಯೂಸ್ : ಟೋಮೋಟೋ ಹಣ್ಣಿನಲ್ಲಿ ವಿಟಮಿನ್ ಎ,ಡಿ,ಸಿ ಅಧಿಕ ಪ್ರಮಾಣದಲ್ಲಿರುತ್ತದೆ. ಇದು ನೆನಪಿನ ಶಕ್ತಿಯನ್ನು ಹೆಚ್ಚಿಸುವ ಜೊತೆಗೆ ಮೆದುಳು ಚುರುಕಾಗಿ ಕೆಲಸ ಮಾಡುವಂತೆ ಮಾಡುತ್ತದೆ.