ಚಳಿಗಾಲ ಬರುತ್ತಿದ್ದಂತೆ ಮೂಲೆಯಲ್ಲಿಟ್ಟ ಸ್ವೆಟರ್, ಶಾಲು, ರಗ್ಗುಗಳು ಹೊರ ಬರುತ್ತವೆ. ಅವುಗಳು ಹೆಚ್ಚು ಕಾಲ ಉಪಯುಕ್ತವಾಗುವಂತೆ ಮಾಡಲು ಈ ಎಲ್ಲಾ ಎಚ್ಚರಿಕೆಗಳು ಗಮನದಲ್ಲಿರಲಿ.
* ಚಳಿಗಾಲದಲ್ಲಿ ಉಪಯೋಗಿಸುವ ಉಣ್ಣೆ ಉಡುಗೆಗಳನ್ನು ಡ್ರೈ ಕ್ಲೀನ್ ಮಾಡಿಸದೆ ಇರುವುದು ಒಳಿತು. ಮನೆಯಲ್ಲಿ ತಣ್ಣೀರಿನಲ್ಲಿ ಬೇಬಿ ಶ್ಯಾಂಪೂ ಹಾಕಿ ಒಗೆಯಬೇಕು. ಚಳಿಗಾಲದ ಆರಂಭದಲ್ಲಿ ಬಳಸದೇ ಇರುವುದಕ್ಕೆ ಮೊದಲು, ಚಳಿಗಾಲ ಆದ ನಂತರ ಭದ್ರಗೊಳಿಸುವುದಕ್ಕೆ ಮುನ್ನ ಮತ್ತೊಂದು ಬಾರಿ ಒಗೆದರೆ ಸಾಕು.
* ಒದ್ದೆಯಾಗಿರುವ ಕಾಶ್ಮೀರಿ ಸ್ವೆಟರ್ ಅನ್ನು ಯಾವ ಕಾರಣಕ್ಕೂ ಜೋತಾಡುವಂತೆ ಇಡದಿರಿ. ಆ ರೀತಿ ಮಾಡಿದರೆ ಸಡಿಲವಾಗುತ್ತದೆ. ಅಷ್ಟೇ ಅಲ್ಲದೆ ಅವುಗಳನ್ನು ಹೆಚ್ಚು ಬಿಸಿಲಿನಲ್ಲಿ ಇಡಬಾರದು. ಸ್ವಲ್ಪ ಪ್ರಮಾಣದಲ್ಲಿ ಬಿಸಿಲು ಬೀಳುವ ಕಡೆ ಒಣಗುವುದಕ್ಕೆ ಹಾಕಬೇಕು.
* ಆದಷ್ಟು ಸ್ವೆಟರ್ ಧರಿಸಿದ ನಂತರ ಸುಗಂಧದ್ರವ್ಯಗಳನ್ನು ಬಳಸಬಾರದು. ಆಹಾರ ಸೇವಿಸುವಾಗ ಪದಾರ್ಥಗಳು ಬಿದ್ದರೆ ತಕ್ಷಣವೇ ಅವುಗಳನ್ನು ಶುಭ್ರಗೊಳಿಸಿ ಕಲೆಯಾಗದಂತೆ ಜಾಗ್ರತೆ ವಹಿಸಬೇಕು. ಇದಕ್ಕಾಗಿ ಬೇಕಿಂಗ್ ಸೋಡಾ ಬಳಸಬಹುದು.
* ಬಹಳಷ್ಟು ಜನರು ಚಳಿಗಾಲವೆಲ್ಲಾ ಒಂದೇ ಸ್ವೆಟರ್ ಬಳಸುತ್ತಾರೆ. ಎರಡು ಇದ್ದರೆ ಒಳಿತು. ಯಾಕೆಂದರೆ ಒಂದನ್ನೇ ಹೆಚ್ಚು ಕಾಲ ಬಳಸಿದರೆ ಸುಕ್ಕಾಗಿ ಬಿಡುತ್ತದೆ. ಅಷ್ಟೇ ಅಲ್ಲದೆ ಹಿಂದೆ ಬಾಗಿದಂತೆ ಕಂಡು ಬರುತ್ತದೆ. ಆದ ಕಾರಣ ಬಳಸಿದ ಪ್ರತಿ ದಿನವೂ ಗಾಳಿಯಲ್ಲಿ ಆರಿಸುವುದು ಒಳಿತು.