ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರು ಮನು ನಾಯಕನಾಗಿ ಅಭಿನಯಿಸಿರುವ ಕೇದಾರನಾಥ್ ಕುರಿ ಫಾರಂ ಚಿತ್ರದ ಮಿರ ಮಿರನೇ ಎಂಬ ಲಿರಿಕಲ್ ಹಾಡನ್ನು ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಸಂತೋಷ್ ವೆಂಕಿ ಧ್ವನಿಯಾಗಿರುವ ಈ ಹಾಡಿಗೆ ಸನ್ನಿ ಡಾನ್ ಅಬ್ರಹಾಂ ಸಂಗೀತ ಸಂಯೋಜನೆ ನೀಡಿದ್ದು, ಚೇತನ್ ಕುಮಾರ್ ಸಾಹಿತ್ಯವಿದೆ.
ಶ್ರೀನಿವಾಸ್ ಸಾಗರ್ ನಿರ್ದೇಶನದ ಈ ಚಿತ್ರದಲ್ಲಿ ಮಡೆನೂರು ಮನು ಸೇರಿದಂತೆ ಶಿವಾನಿ, ಟೆನ್ನಿಸ್ ಕೃಷ್ಣ, ಕರಿಸುಬ್ಬು, ಸುನಂದ, ಹಾಗೂ ಮುತ್ತುರಾಜ್ ಬಣ್ಣ ಹಚ್ಚಿದ್ದಾರೆ. ಕೆ ಎಂ ಪ್ರಕಾಶ್ ಸಂಕಲನ, ಹಾಗೂ ರಾಕೇಶ್ ತಿಲಕ್ ಛಾಯಾಗ್ರಹಣವಿದೆ. ಕೆಎಂ ನಟರಾಜ್ ನಿರ್ಮಾಣ ಮಾಡಿದ್ದು, ಇನ್ನುಳಿದಂತೆ ರಾಜೇಶ್ ಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.