
ತಮ್ಮ ಹೊಸ ಕಾಮಿಕ್ ಬುಕ್ ಸರಣಿ BRZRKRಯ ಪುಸ್ತಕಗಳಿಗೆ ಖುದ್ದು ಹಸ್ತಾಕ್ಷರ ಹಾಕಿ ಕೊಡುವ ವೇಳೆ 9-ವರ್ಷದ ಬಾಲಕನೊಂದಿಗೆ ಸಂವಾದ ನಡೆಸಿದ ಕೀನು ರೀವ್ಸ್‌ರ ವಿಡಿಯೋ ವೈರಲ್ ಆಗಿದೆ.
ಲಾಸ್ ಏಂಜಿಲಿಸ್‌ನಲ್ಲಿ ನಡೆದ ಸಮಾರಂಭವೊಂದರಲ್ಲಿ ತಮ್ಮ ಬಾಲಾಭಿಮಾನಿಯೊಂದಿಗೆ ಕೆಲ ನಿಮಿಷಗಳ ಕಾಲ ಮಾತನಾಡಿದ ರೀವ್ಸ್ ಆತನಿಗೊಂದು ಹಸ್ತಾಕ್ಷರವಿದ್ದ ಪುಸ್ತಕ ಕೊಟ್ಟಿದ್ದು, ಜೊತೆಗ ಟಾಯ್ ಸ್ಟೋರಿ 4 ಪಾತ್ರದ ದನಿಯನ್ನೂ ಮರುಸೃಷ್ಟಿಸಿದ್ದಾರೆ.
“ಬಹುಶಃ ನೀವು ನನ್ನ ಪಾಲಿಗೆ ಜಗತ್ತಿನಲ್ಲೇ ಅತ್ಯಂತ ಇಷ್ಟದ ನಟ,” ಎಂದು ಬಾಲಕ ರೀವ್ಸ್‌ಗೆ ಈ ವೇಳೆ ತಿಳಿಸಿದ್ದಾನೆ. ಇದಕ್ಕೆ ಪ್ರತಿಕ್ರಿಯಿಸಿದ ರೀವ್ಸ್, “ಟಾಯ್ ಸ್ಟೋರಿ 4ನ ಡ್ಯೂಕ್ ಕಾಬೂಮ್ ಕಥೆಯನ್ನು ನೋಡಿದ್ದೀರಾ?” ಎಂದು ಕೇಳಿದ್ದು, ಇದಕ್ಕೆ ಉತ್ತರ ಕೊಟ್ಟ ಬಾಲಕ, “ಹೌದು, ಅದು ನನ್ನ ಅಚ್ಚುಮೆಚ್ಚಿನ ಪಾತ್ರ,” ಎಂದಿದ್ದಾನೆ.
https://youtu.be/91keERhjkMM