ಬೆಂಗಳೂರು: UG NEET-24 ಚಾಯ್ಸ್ ದಾಖಲು ದಿನಾಂಕವನ್ನು ಸೆ.5 ರ ಬೆಳಿಗ್ಗೆ 11ರವರೆಗೆ ವಿಸ್ತರಿಸಲಾಗಿದೆ. ಶುಲ್ಕ ಪಾವತಿಗೆ ಸೆ.5ರ 4ಗಂಟೆವರೆಗೆ ಅವಕಾಶ ನೀಡಲಾಗಿದ್ದು, ಕಾಲೇಜಿಗೆ ವರದಿ ಮಾಡಿಕೊಳ್ಳಲು ಸೆ.6 ಕೊನೆ ದಿನವಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.
ವೈದ್ಯಕೀಯ / ದಂತವೈದ್ಯಕೀಯ / ಆಯುಷ್ ಕೋರ್ಸುಗಳಿಗೆ ಸೀಟು ಹಂಚಿಕೆಯಾದ ಅಭ್ಯರ್ಥಿಗಳಿಗೆ Choice ಗಳನ್ನು ಆಯ್ಕೆ ಮಾಡಿಕೊಳ್ಳಲು ನಂತರ ಶುಲ್ಕ ಪಾವತಿ ಮಾಡಲು, ಮೂಲ ದಾಖಲೆಗಳನ್ನು ಸಲ್ಲಿಸಲು ಹಾಗು ಆಯಾ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ದಿನಾಂಕಗಳನ್ನು ಈ ಕೆಳಗಿನಂತೆ ವಿಸ್ತರಣೆ ಮಾಡಲಾಗಿದೆ. (ದಿನಾಂಕ 07-09-2024 ಗಣೇಶ ಚತುರ್ಥಿ ಪ್ರಯುಕ್ತ ಮತ್ತು 08-09-2024 ಭಾನುವಾರ ಸಾರ್ವತ್ರಿಕ ರಜಾ ದಿನಗಳ ಬಗ್ಗೆ ಗಮನದಲ್ಲಿರಿಸಿಕೊಳ್ಳಬಹುದಾಗಿದೆ)
ಪೋಷಕರ ಜೊತೆ ಚರ್ಚಿಸಿ ಸೂಕ್ತವಾದ CHOICE ಅನ್ನು ಆಯ್ಕೆ ಮಾಡಿಕೊಳ್ಳಲು 05-09-2024 up to 11.00 am
Choice 1 and Choice-2 ಆಯ್ಕೆ ಮಾಡಿದ ಅಭ್ಯರ್ಥಿಗಳು ಶುಲ್ಕ ಪಾವತಿ ಮಾಡುವುದು 05-09-2024 ರಂದು 10.30 am to 4.00 pm
Choice 1 ಆಯ್ಕೆ ಮಾಡಿ ಶುಲ್ಕ ಪಾವತಿಸಿದ ಅಭ್ಯರ್ಥಿಗಳು ಮೂಲ ದಾಖಲೆಗಳನ್ನು ಮತ್ತು ಎರಡು ಸೆಟ್ ದೃಢೀಕೃತ ಜೆರಾಕ್ಸ್ ಪ್ರತಿಗಳೊಂದಿಗೆ ಕೆಇಎ, ಬೆಂಗಳೂರು ಇಲ್ಲಿ ಖುದ್ದಾಗಿ ಸಲ್ಲಿಸುವುದು. ಯಾವ ವರ್ಗದ ಅಭ್ಯರ್ಥಿಗಳು ಮೂಲ ದಾಖಲೆಗಳನ್ನು ಸಲ್ಲಿಸಬೇಕು – ಸೂಚನೆಗಳನ್ನು ಓದಿಕೊಳ್ಳಿ.
Choice 1 ಆಯ್ಕೆ ಮಾಡಿ ಶುಲ್ಕ ಪಾವತಿಸಿ ಮೂಲ ದಾಖಲೆಗಳನ್ನು ಸಲ್ಲಿಸಿದ ಅಭ್ಯರ್ಥಿಗಳು admission order ಅನ್ನು Download ಮಾಡುವುದು. Up to 2.00 pm on 06-09-2024
ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಕೊನೆಯ ದಿನಾಂಕ(ಎಲ್ಲಾ ಧೃಡೀಕರಿಸಿದ ದಾಖಲಾತಿಗಳೊಂದಿಗೆ – Verification slip ನಲ್ಲಿ ನಮೂದಿಸಿರುವಂತೆ) 06-09-2024 before 5.30 pm
ವಿವರಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್ ಸೈಟ್ http://kea.kar.nic.in ಗಮನಿಸಬಹುದಾಗಿದೆ.