ಬೆಂಗಳೂರು: UGCET-24 ಎರಡನೇ ಮುಂದುವರಿದ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶ ಪ್ರಕಟಿಸಿದ್ದು, ಸೀಟು ಹಂಚಿಕೆಯಾಗಿರುವವರು ಶುಲ್ಕ ಪಾವತಿಸಿ, ಕಾಲೇಜಿನಲ್ಲಿ ಪ್ರವೇಶ ಪಡೆಯಲು ಅ.15ವರೆಗೆ ಅವಕಾಶ ನೀಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.
ಇಂಜಿನಿಯರಿಂಗ್, ಆರ್ಕಿಟೆಕ್ಟರ್, ಯೋಗ ಮತ್ತು ನ್ಯಾಚುರೋಪತಿ, ಕೃಷಿ ವಿಜ್ಞಾನ, ವೆಟರಿನರಿ, ಬಿಎಸ್(ನರ್ಸಿಂಗ್) ಬಿ-ಫಾರ್ಮಾ, ಡಿ ಫಾರ್ಮಾ ಮುಂತಾದ ಕೋರ್ಸುಗಳಿಗೆ UGCET-2024-ಸೆಕೆಂಡ್ ವಿಸ್ತೃತ ರೌಂಡ್ ಪೋಸ್ಟ್ ಸೀಟ್ ಅಲಾಟ್‌ಮೆಂಟ್ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಲಾಗಿದೆ.
ಎರಡನೇ ಮುಂದುವರಿದ ಸುತ್ತಿನಲ್ಲಿ ಸೀಟು ಹಂಚಿಕೆಯಾಗಿರುವ ಹಾಗೂ ಶುಲ್ಕವನ್ನು ಪಾವತಿಸುವ ಮೂಲಕ ವೈದ್ಯಕೀಯ ಮಾಪ್ ಅಪ್ ಸುತ್ತಿನಲ್ಲಿ ಭಾಗವಹಿಸುತ್ತಿರುವ ಅಭ್ಯರ್ಥಿಗಳು ವೈದ್ಯಕೀಯ ಮಾಪ್ ಅಪ್ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶ ಪ್ರಕಟಣೆಯವರೆಗೆ ಕಾಯಲು ಈ ಮೂಲಕ ತಿಳಿಸಲಾಗಿದೆ.
ದೂರವಾಣಿ: 080-23 564 583, ಸಹಾಯವಾಣಿ: 080-23 460 460, ಇ-ಮೇಲ್: keauthority-ka@nic.in, ವೆಬ್‌ಸೈಟ್: http://kea.kar.nic.in