ಬೆಂಗಳೂರು: ಆಗಸ್ಟ್ 4ರಿಂದ ಪಿಜಿ ನೀಟ್ ದಾಖಲೆ ಪರಿಶೀಲನೆ ನಡೆಯಲಿದೆ. ಪಿಜಿ ನೀಟ್ ನಲ್ಲಿ ಅರ್ಹತೆ ಹೊಂದಿ ಮೆಡಿಕಲ್ ಮತ್ತು ಡೆಂಟಲ್ ಕೋರ್ಸ್ ಗಳಿಗೆ ಪ್ರವೇಶ ಬಯಸಿದ ಅಭ್ಯರ್ಥಿಗಳ ಮೂಲ ದಾಖಲಾತಿ ಪರಿಶೀಲನೆ ನಡೆಸಲಾಗುವುದು.
ನಿಗದಿತ ದಿನಗಳಂದು ಬೆಳಗ್ಗೆ 9ರಿಂದ ಸಂಜೆ 6:15 ರವರೆಗೆ ದಾಖಲಾತಿ ಪರಿಶೀಲನೆ ನಡೆಸಲಿದ್ದು, ಅಭ್ಯರ್ಥಿಗಳು ನಿಗದಿತ ದಿನಗಳಂದು ಮೂಲ ದಾಖಲಾತಿಗಳೊಂದಿಗೆ ಪ್ರಾಧಿಕಾರದ ಕೇಂದ್ರ ಕಚೇರಿಗೆ ಹಾಜರಾಗಬೇಕು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಸ್. ರಮ್ಯಾ ತಿಳಿಸಿದ್ದಾರೆ.
ದಾಖಲಾತಿ ಪರಿಶೀಲನೆ ವೇಳೆ ಲ್ಯಾಮಿನೇಟ್ ಮಾಡಿರುವ ಮೂಲ ದಾಖಲೆಗಳನ್ನು ಪರಿಗಣಿಸುವುದಿಲ್ಲ. ರ್ಯಾಂಕ್ ಮತ್ತು ಸಮಯದ ಮಾಹಿತಿಗಾಗಿ ಪ್ರಾಧಿಕಾರದ http://kea.kar.nic.in ವೆಬ್ಸೈಟ್ ಗಮನಿಸಬಹುದಾಗಿದೆ ಎಂದು ಹೇಳಲಾಗಿದೆ.