ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA) ವತಿಯಿಂದ 2024ರಲ್ಲಿ ನೀಟ್ ಪರೀಕ್ಷೆ ಬರೆದು ಅರ್ಹತೆ ಪಡೆದ ರಾಜ್ಯದ ಅಭ್ಯರ್ಥಿಗಳ ಅರ್ಹತಾ ಪಟ್ಟಿಯನ್ನು ವೆಬ್ಸೈಟ್ ನಲ್ಲಿ ಪ್ರಕಟಿಸಲಾಗಿದೆ.
ಈ ಬಾರಿ ರಾಜ್ಯದಲ್ಲಿ 92,858 ವಿದ್ಯಾರ್ಥಿಗಳು ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸೀಟು ಪ್ರವೇಶ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅರ್ಹತೆ ಹೊಂದಿದ್ದಾರೆ. 127 ಕಟ್ ಆಫ್ ಅಂಕಗಳನ್ನು ನಿಗದಿ ಮಾಡಲಾಗಿದೆ. ವಿದ್ಯಾರ್ಥಿಗಳು ಈ ಪಟ್ಟಿ ಪರಿಶೀಲಿಸಿ ತಮ್ಮ ರ್ಯಾಂಕಿಂಗ್, ಸೀಟ್ ಲಭ್ಯತೆಯ ಮಾಹಿತಿ ಪಡೆದುಕೊಳ್ಳಬಹುದು.
ಕೇಂದ್ರ ಸರ್ಕಾರ ಆಗಸ್ಟ್ 14 ರಿಂದ ಕೌನ್ಸೆಲಿಂಗ್ ಆರಂಭಿಸಲಿದ್ದು, ಸಂಬಂಧಿಸಿದ ಪ್ರಕ್ರಿಯೆಗಳು ಪ್ರಾರಂಭವಾಗಿವೆ. ರಾಜ್ಯದಲ್ಲಿ 716 ಅಂಕಗಳನ್ನು ಪಡೆದ ಪದ್ಮನಾಭ ಮೆನನ್ ಯುಜಿ ನೀಟ್ ರ್ಯಾಂಕ್ ನಲ್ಲಿ 21ನೇ ಸ್ಥಾನ ಪಡೆದಿದ್ದಾರೆ. ನೀಟ್ ಪರೀಕ್ಷೆ ಮೂಲಕ ವೈದ್ಯಕೀಯ ಕೋರ್ಸ್ ಗಳ ಪ್ರವೇಶಕ್ಕೆ ಅರ್ಹತೆ ಪಡೆದ ರಾಜ್ಯದ ಅಭ್ಯರ್ಥಿಗಳ ಅರ್ಹತಾ ಪಟ್ಟಿಯನ್ನು ಕೆಇಎ ವೆಬ್ಸೈಟ್ ನಲ್ಲಿ ಗಮನಿಸಬಹುದಾಗಿದೆ.