ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇತ್ತೀಚೆಗೆ ನಡೆಸಿದ್ದ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದು ಬಯಲಾಗಿತ್ತು. ಪ್ರಕರಣದ ಕಿಂಗ್ ಪಿನ್ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಈ ನಡುವೆ ಪರೀಕ್ಷೆಯ ಓಎಂಆರ್ ಶೀಟ್ ಸಾಮಾಜಿಕ ಜಾಲತಾಣಗಲಲ್ಲಿ ವೈರಲ್ ಆಗಿದೆ.
ಹುಬ್ಬಳ್ಳಿಯಿಂದ ಓಎಂಆರ್ ಶೀಟ್ ವೈರಲ್ ಆಗಿದ್ದು, ಪರೀಕ್ಷಾ ಕೇಂದ್ರದಲ್ಲಿ ಮೊಬೈಲ್, ಕ್ಯಾಮರಾ ನಿಷಧವಿದ್ದರೂ ಓಎಂಆರ್ ಶೀಟ್ ಫೋಟೋ ವೈರಲ್ ಆಗಲು ಹೇಗೆ ಸಾಧ್ಯವಾಗಿದೆ ಎಂಬುದು ಪ್ರಶ್ನೆ.
ಕಲಬುರ್ಗಿ, ಯಾದಗಿರಿಯಲ್ಲಿ ನಡೆದಿದ್ದ ಪರೀಕ್ಷೆಯಲ್ಲಿ ಅಭ್ಯರ್ಥಿಗಳಿಬ್ಬರು ಬ್ಲೂಟೂತ್ ಬಳಿಸಿ ಪರೀಕ್ಷೆ ಬರೆದಿದ್ದರು. ಈಗ ವೈರಲ್ ಆಗಿರುವ ಓಎಂಆರ್ ಶೀಟ್ ನೋಡಿದರೆ ಬೇರೆ ಜಿಲ್ಲೆಗಳಲ್ಲಿಯೂ ಅಕ್ರಮ ನಡೆದಿರುವ ಶಂಕೆ ವ್ಯಕ್ತವಾಗಿದೆ.