ಬೆಂಗಳೂರು: ಎಂಬಿಎ, ಎಂಸಿಎ, ಎಂಇ, ಆರ್ಕಿಟೆಕ್ಚರ್ ಕೋರ್ಸ್ ಗಳ ಪ್ರವೇಶಕ್ಕೆ ನಡೆಸಿದ್ದ ಪಿಜಿ ಸಿಇಟಿ -2024ರ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಪ್ರಕಟಿಸಿದೆ.
ಈ ಫಲಿತಾಂಶ ಆಧರಿಸಿ ವೆರಿಫಿಕೇಶನ್ ಸ್ಲಿಪ್ ಬಿಡುಗಡೆ ಮಾಡಲಾಗಿದೆ. ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್ಸೈಟ್ ನಲ್ಲಿ ನಿಗದಿತ ಲಿಂಕ್ ಆಯ್ಕೆ ಮಾಡಿಕೊಂಡು ವೆರಿಫಿಕೇಶನ್ ಸ್ಲಿಪ್ ಡೌನ್ಲೋಡ್ ಮಾಡಿಕೊಳ್ಳಬೇಕಿದೆ.
ನಂತರ ಅಗತ್ಯವಿರುವ ಪ್ರಮಾಣ ಪತ್ರ, ದಾಖಲೆಗಳು, ಅಂಕಪಟ್ಟಿ, ವ್ಯಾಸಂಗ ಮತ್ತು ಮೀಸಲಾತಿ ಪ್ರಮಾಣ ಪತ್ರಗಳನ್ನು ಕಡ್ಡಾಯವಾಗಿ ಸಿದ್ಧಪಡಿಸಿಕೊಂಡು ಸೀಟು ಹಂಚಿಕೆಯಾದ ನಂತರ ಕಾಲೇಜಿನಲ್ಲಿ ಪ್ರವೇಶ ಪಡೆಯುವಂತೆ ಪ್ರಾಧಿಕಾರ ತಿಳಿಸಿದೆ.
ಕರ್ನಾಟಕ ಹೊರಗಿನ ಅಭ್ಯರ್ಥಿಗಳಿಗೆ ಯಾವುದೇ ಮೀಸಲಾತಿ ಅನ್ವಯವಾಗುವುದಿಲ್ಲ. ಆದ್ದರಿಂದ ಸಾಮಾನ್ಯ ವರ್ಗಕ್ಕೆ ನಿಗದಿಪಡಿಸಿದ ಕನಿಷ್ಠ ಶೇಕಡ 50ರಷ್ಟು ಅಂಕ ಪಡೆದಿದ್ದಲ್ಲಿ ಮಾತ್ರ ಅರ್ಹತೆ ಪಡೆಯಬಹುದಾಗಿದೆ.