ಬೆಂಗಳೂರು: ಇಂದಿನಿಂದ ಐದು ದಿನ ಸಿಇಟಿ ಆನ್ಲೈನ್ ಅರ್ಜಿ ಸಲ್ಲಿಕೆ ಲಭ್ಯವಿರುವುದಿಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಾಹಿತಿ ನೀಡಿದೆ.
ಶಾಲಾ ಶಿಕ್ಷಣ ಇಲಾಖೆಯ ವಿದ್ಯಾರ್ಥಿ ಸಾಧನೆಯ ಟ್ರ್ಯಾಕಿಂಗ್ ವ್ಯವಸ್ಥೆ(ಸ್ಯಾಟ್ಸ್) ಡೇಟಾಬೇಸ್ ಅಲಭ್ಯದ ಕಾರಣ ಜ.13 ರಿಂದ 17ರವರೆಗೆ ಸಿಇಟಿ 2024 ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ಅವಕಾಶ ಇರುವುದಿಲ್ಲ ಎಂದು ಕೆಇಎ ಮಾಹಿತಿ ನೀಡಿದೆ.
ಡೇಟಾಬೇಸ್ ಉನ್ನತೀಕರಣದ ವೇಳೆ ಸ್ಯಾಟ್ಸ್ ಸಂಖ್ಯೆ ಸಿಗುವುದಿಲ್ಲ. ಹೀಗಾಗಿ ಸಿಇಟಿ ಅರ್ಜಿ ಪರಿಶೀಲನೆ ಸಾಧ್ಯವಾಗುವುದಿಲ್ಲ. ಆದ್ದರಿಂದ ಜ. 13 ರಿಂದ 17ರವರೆಗೆ ಸಿಇಟಿ ಅರ್ಜಿ ಸಲ್ಲಿಕೆ ಅಲಭ್ಯವಾಗಿರುತ್ತದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರಾದ ಎಸ್. ರಮ್ಯಾ ತಿಳಿಸಿದ್ದಾರೆ.