UG CET, UG NEET-24 ಎರಡನೇ ಸುತ್ತಿನ ಸೀಟು ಹಂಚಿಕೆಯ ವೇಳಾಪಟ್ಟಿ ಪ್ರಕಟಿಸಲಾಗಿದೆ. ಸೆ.8 ಕ್ಕೆ ಸೀಟ್ ಮ್ಯಾಟ್ರಿಕ್ಸ್ ಪ್ರಕಟಿಸಲಾಗುತ್ತದೆ.
ಸೆ.9 ಕ್ಕೆ Caution Deposit ಪಾವತಿಸಬೇಕು. ಸೆ.8 ರಿಂದ 11 ರವರೆಗೆ Options ಬದಲಿಸಿಕೊಳ್ಳಲು ಅವಕಾಶ ನೀಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.
ಸೀಟ್ ಮ್ಯಾಟ್ರಿಕ್ಸ್ ನಲ್ಲಿ ಸೀಟುಗಳ ಲಭ್ಯತೆಯನ್ನು ತೋರಿಸದಿದ್ದರೂ ಸಹ ಅಭ್ಯರ್ಥಿಗಳು ಆದ್ಯತೆಗಳನ್ನು ಉಳಿಸಿಕೊಳ್ಳಲು / ಬದಲಾಯಿಸಲು / ಮಾರ್ಪಡಿಸಲು ಸಲಹೆ ನೀಡಲಾಗಿದೆ. ಯಾಕೆಂದರೆ ಸೀಟು ಹಂಚಿಕೆಯ ಕಾರ್ಯದಲ್ಲಿ ಉದ್ಭವಿಸುವ ಸೀಟುಗಳನ್ನೂ ಸಹ ಹಂಚಿಕೆ ಮಾಡುವುದರಿಂದ ಅಭ್ಯರ್ಥಿಗಳು ಆಯ್ಕೆಗಳನ್ನು ನಮೂದಿಸಿದ್ದಲ್ಲಿ ಅಂತಹ ಸೀಟುಗಳನ್ನು ಪಡೆಯಬಹುದಾಗಿದೆ.
Phone: 080-23 564 583, Helpline: 080-23 460 460. e-mail: keauthority-ka@nic.in, Website: http://kea.kar.nic.in