
ಬೆಂಗಳೂರು: ಕೃಷಿ ವಿಜ್ಞಾನ, ಇಂಜಿನಿಯರಿಂಗ್, ಪಶು ವೈದ್ಯಕೀಯ, ಬಿಎಸ್ಸಿ ನರ್ಸಿಂಗ್ ಮೊದಲಾದ ವೃತ್ತಿಪರ ಕೋರ್ಸ್ ಪ್ರವೇಶಕ್ಕೆ ನಡೆಸುವ ಸಿಇಟಿ ಪರೀಕ್ಷೆ ಮೇ 20, 21 ರಂದು ನಡೆಯಲಿದೆ.
ಸಿಇಟಿಗೆ ಆನ್ಲೈನ್ ಮೂಲಕ ಸಲ್ಲಿಸಿದ ಅರ್ಜಿಯಲ್ಲಿನ ಮಾಹಿತಿ ತಿದ್ದುಪಡಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕೊನೆಯ ಅವಕಾಶ ಕಲ್ಪಿಸಿದೆ. ಈಗಾಗಲೇ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು 21ರ ಸಂಜೆ 6 ಗಂಟೆಯಿಂದ ಮೇ 24ರ ರಾತ್ರಿ 11:59ರ ವರೆಗೆ ತಾವು ದಾಖಲಿಸಿರುವ ಯಾವುದೇ ಮಾಹಿತಿಯಲ್ಲಿ ತಿದ್ದುಪಡಿ ಅಗತ್ಯವಿದ್ದರೆ ಮಾಡಬಹುದಾಗಿದೆ ಮಾಹಿತಿಗಾಗಿ ಪ್ರಾಧಿಕಾರದ ವೆಬ್ಸೈಟ್ http://kea.kar.nic.in ಗಮನಿಸಬಹುದಾಗಿದೆ.
ಗಡಿನಾಡು ಹೊರನಾಡು ಕನ್ನಡ ವಿದ್ಯಾರ್ಥಿಗಳಿಗೆ ಮೇ 22 ರಂದು ಕನ್ನಡ ಪರೀಕ್ಷೆ ನಡೆಯಲಿದೆ.